ಅಕ್ಷಯ ಕಾಲೇಜ್ ಪುತ್ತೂರಿನಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಡಾ. ಮಾಧವ ಎಂ ಕೆ ಇವರು ಉದ್ಘಾಟಿಸಿ, ಕಾರ್ಯಕ್ರಮದ ಕುರಿತು ಶುಭನುಡಿಗಳನ್ನು ನುಡಿದರು.

ಸಂಪನ್ಮೂಲ ವ್ಯಕ್ತಿ ಡಾ. ಅನಂತ ಕೃಷ್ಣ ಭಟ್ ಮಾತನಾಡಿ ಪ್ರಪಂಚದ ಸುದೀರ್ಘ ಸಂವಿಧಾನ ಎಂದರೆ ಭಾರತ ಇವರು ಸಂವಿಧಾನದ ಹಕ್ಕುಗಳು ಹಾಗೂ ರೀತಿ ನಿಯಮಗಳನ್ನು ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಮಾಹಿತಿ
ನೀಡಿದರು.
ಸಂವಿಧಾನ ಎಂದರೆ ನಿಂತ ನೀರಲ್ಲ ಚಲಿಸುವ ನೀರು ಎಂದು ವಿದ್ಯಾರ್ಥಿಗಳಿಗೆ ಮನಮುಟ್ಟುವ ರೀತಿ ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಡಾ. ಪಿ ಅನಂತ ಕೃಷ್ಣ ಇವರು ಬರೆದಿರುವ ಸ್ವಾತಂತ್ರ್ಯೋತರ ಅಮೃತವರ್ಷ ಭಾರತ ಸಂವಿಧಾನ ಒಂದು ಸುಂದರ ಪಕ್ಷಿನೋಟ ಎಂಬ ಪುಸ್ತಕವನ್ನು ನಮ್ಮ ಕಾಲೇಜಿನ ಗ್ರಂಥಾಲಯಕ್ಕೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ ಶ್ರೀಯುತ ಜಯಂತ್ ನಡುಬೈಲ್ ಅಧ್ಯಕ್ಷರು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳು ಪುತ್ತೂರು ಕಾರ್ಯಕ್ರಮವನ್ನು ಉದ್ದೇಶಿಸಿ ಶುಭನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ ಸಂಯೋಜಕರಾದ ರಶ್ಮಿ ಕೆ. ಹಾಗೂ ಉಪಪ್ರಾಂಶುಪಾಲರಾದ ರಕ್ಷಣ್ ಟಿ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು . ಡಾ. ಪ್ರಮೋದ್ ಕೆ.ಆರ್.ಎಂ.ಎಸ್.ಎಸ್ ಮಂಗಳೂರು ಕಾರ್ಯಕ್ರಮದ ಕುರಿತು ಪ್ರಾಸ್ತವಿಕ ನುಡಿಗಳನ್ನಾಡಿ, ಎಲ್ಲರನ್ನು ಸ್ವಾಗತಿಸಿದರು. ಕು. ಸುಶ್ಮಿತಾ ಮತ್ತು ಕು.ಗ್ರೀಷ್ಮಾ ಪ್ರಾರ್ಥಿಸಿದರು. ಶ್ರೀ ಹರಿಶ್ಚಂದ್ರ ಕನ್ನಡ ವಿಭಾಗ ಉಪನ್ಯಾಸಕರು ಸರ್ವರನ್ನು ವಂದಿಸಿದರು. ಕಾರ್ಯಕ್ರಮವನ್ನು ಉದಿತ್ ದ್ವಿತೀಯ ವಾಣಿಜ್ಯ ವಿಭಾಗ ಇವರು ನಿರೂಪಿಸಿದರು.
