- Admission
- Eligibilty
- Sports/NSS Facilities
- Alumni
- Faculty
ಅಕ್ಷಯ ಕಾಲೇಜಿನಲ್ಲಿ ಮೇಳೈಸಿದ ಜಿಲ್ಲಾ ಮಟ್ಟದ ಅಂತರ್ - ಕಾಲೇಜು ಫೆಸ್ಟ್ ' ಅಟೆರ್ನಸ್'

ಸಂಪ್ಯದಲ್ಲಿ ಅಕ್ಷಯ ಎಜುಕೇಶನಲ್ ಟ್ರಸ್ಟ್ ನಡಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ದಕ್ಷಿಣ ಕನ್ನಡ, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಪದವಿ ಪೂರ್ವ ಕಾಲೇಜು ವಿಭಾಗದ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಫೆಸ್ಟ್ ‘ ಅಟೆರ್ನಸ್’ ದ.೨೩ ರಂದು ಕಾಲೇಜಿನ ಸಭಾಂಗಣದಲ್ಲಿ ಜರಗಿದ್ದು, ಸಂಭಮದ ತೆರೆ ಕಂಡಿದೆ. ಹತ್ತು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗಿದ್ದು ಅಂತಿಮವಾಗಿ ೧೨೦ ಅಂಕಗಳನ್ನು ಗಳಿಸಿದ ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜು ಚೊಚ್ಚಲ ಆವೃತಿಯ ಚಾಂಪಿಯನ್ ಎನಿಸಿಕೊಂಡಿದ್ದು, ನಿಂತಿಕಲ್ಲು ಕೆ.ಎಸ್ ಗೌಡ ಕಾಲೇಜು ರನ್ನರ್ಸ್, ಸುಬ್ರಮಣ್ಯ ಎಸ್ ಎಸ್ ಪಿಯು ಕಾಲೇಜು ತೃತೀಯ ಸ್ಥಾನವನ್ನು ಗಳಿಸಿಕೊಂಡಿದೆ. ಚಾಂಪಿಯನ್ ತಂಡಕ್ಕೆ ಪ್ರಶಸ್ತಿ ಫಲಕದೊಂದಿಗೆ ರೂ.೧೨ ಸಾವಿರ ನಗದು, ರನ್ನರ್ಸ್ ತಂಡಕ್ಕೆ ಪ್ರಶಸ್ತಿ ಫಲಕದೊಂದಿಗೆ ರೂ.೧೦ ಸಾವಿರ ನಗದು ಹಾಗೂ ತೃತೀಯ ಸ್ಥಾನಿಗೆ ಪ್ರಶಸ್ತಿ ಫಲಕದೊಂಡಿಗೆ ರೂ.೮ ಸಾವಿರ ನಗದನ್ನು ನೀಡಲಾಯಿತು. ಅಲ್ಲದೆ ಪ್ರತಿ ಇವೆಂಟ್ ಗಳ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿಜೇತರಿಗೂ ನಗದನ್ನು ನೀಡಲಾಗಿತ್ತು.







































Previous image
Next image
ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಡಾ. ಕಿಶೋರ್ ಕುಮಾರ್ ಸಿ.ಹೆಚ್, ರಿಜಿಸ್ಟ್ರರ್ ಮಂಗಳೂರು ವಿಶ್ವವಿದ್ಯಾನಿಲಯ. ಶ್ರೀ. ಜಯಣ್ಣ ಸಿ.ಡಿ, ಡಿಡಿಪಿಯು ಡಿ.ಕೆ. ಶ್ರೀ. ಮೊಹಮ್ಮದ್ ಅಲಿ, ಅಧ್ಯಕ್ಷರು, ವ್ಯವಸಾಯ ಸೇವಾ ಸಹಕಾರಿ ಸಂಘ, ಆರ್ಯಾಪು, ಶ್ರೀ ಅಶೋಕ್ ಕುಮಾರ್ ರೈ, ಟ್ರಸ್ಟಿ, ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ (ರಿ). ಶ್ರೀ ಜಯಂತ ನಡುಬೈಲ್, ಅಧ್ಯಕ್ಷರು, ಅಕ್ಷಯ ಕಾಲೇಜು ಪುತ್ತೂರು. ಶ್ರೀಮತಿ. ಕಲಾವತಿ ಜಯಂತ್, ಆಡಳಿತ ವ್ಯವಸ್ಥಾಪಕರು, ಶ್ರೀ. ಸಂಪತ್ ಪಕ್ಕಳ, ಪ್ರಾಂಶುಪಾಲರು, ಶ್ರೀ. ಅರ್ಪಿತ್ ಟಿ. ಎ, ಆಡಳಿತಾಧಿಕಾರಿ, ಶ್ರೀ. ಸತೀಶ್ ನಾಯ್ಕ್ ಸಿ. ಕಂವೇನರ್ ‘ಅಟೆರ್ನಸ್’, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.