ಅಕ್ಷಯ ಕಾಲೇಜು ಪುತ್ತೂರು ಇದರ ಫ್ಯಾಶನ್ ಡಿಸೈನ್ ವಿಭಾಗದ & ಫೇಸರ & IQAC ಫ್ಯಾಶನ್ ಡಿಸೈನ್ ಅಸೋಸಿಯೇಷನ್ ನ ಆಯೋಜನೆಯಲ್ಲಿ ಮತ್ತು ಐಕ್ಯೂಏಸಿ ಸಹಯೋಗದಲ್ಲಿ ನಡೆದ ಸಾಂಪ್ರದಾಯಿಕ ದಿನಾಚರಣೆ – 2024ರ ಪ್ರಯುಕ್ತ ಫ್ಯಾಶನ್ ಶೋ ದಿನಾಂಕ : 19- 10- 2024 ರಂದು ಮಧ್ಯಾಹ್ನ 12:00 ಗಂಟೆಗೆ ಕಾಲೇಜಿನ ಆಡಿಟೋರಿಯಂ ನಲ್ಲಿ ನಡೆಯಿತು.
ಸಾಂಪ್ರದಾಯಿಕ ಉಡುಗೆಗಳ ವಿಷಯದಲ್ಲಿ ನಡೆದ ಫ್ಯಾಶನ್ ಶೋ ಸ್ಪರ್ಧೆಯ ಉದ್ಘಾಟಕರಾಗಿ ವಿದುಷಿ ಪ್ರೀತಿಕಲಾ, ನಿರ್ದೇಶಕರು, ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ, ಪುತ್ತೂರು ಅವರು ಆಗಮಿಸಿದ್ದರು. ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಅಧ್ಯಕ್ಷರಾದ ಶ್ರೀ ಜಯಂತ್ ನಡುಬೈಲು ಇವರು ವಹಿಸಿದ್ದು, ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂಪತ್ ಕೆ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ. ಎ., ಫ್ಯಾಶನ್ ಡಿಸೈನ್ ಅಸೋಸಿಯೇಷನ್ ಮುಖ್ಯಸ್ಥರಾದ ಶ್ರೀ ಕಿಶನ್ ಎನ್. ರಾವ್ ಹಾಗೂ ಅಧ್ಯಾಪಕ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಥಮ ಫ್ಯಾಶನ್ ಡಿಸೈನ್ ವಿಭಾಗದ ಮೋಕ್ಷ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ತೃತೀಯ ಫ್ಯಾಶನ್ ಡಿಸೈನ್ ವಿದ್ಯಾರ್ಥಿನಿ ಧನ್ಯಶ್ರೀ ಅವರು ಸ್ವಾಗತ ಮಾಡಿದರು. ಉದ್ಘಾಟಕರ ಕಿರುಪರಿಚಯವನ್ನು ತೃತೀಯ ಫ್ಯಾಶನ್ ಡಿಸೈನ್ ವಿದ್ಯಾರ್ಥಿನಿ ಐಶ್ವರ್ಯ ಅವರು ಮಾಡಿದರು.ಕಾರ್ಯಕ್ರಮದ ಕೊನೆಯಲ್ಲಿ ಫ್ಯಾಶನ್ ಶೋ ಸ್ಪರ್ಧೆಯ ಫಲಿತಾಂಶವನ್ನು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ರಶ್ಮಿ ಅವರು ಘೋಷಿಸಿದರು.
ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತೃತೀಯ ಫ್ಯಾಶನ್ ಡಿಸೈನ್ ವಿದ್ಯಾರ್ಥಿನಿ ಅಮಿತ ಅವರು ಧನ್ಯವಾದ ಸಮರ್ಪಿಸಿದರು.