ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಇದರ ನೇತೃತ್ವದಲ್ಲಿ ನನ್ನ ಭಾರತಕ್ಕಾಗಿ ಯುವ ಜನತೆ, ಡಿಜಿಟಲ್ಸಾಕ್ಷರತೆಗಾಗಿ ಯುವಜನತೆ & ಎಂಬ ಶಿರೋನಾಮೆಯೊಂದಿಗೆ ವಾರ್ಷಿಕ ವಿಶೇಷ ಶಿಬಿರ 2025-26 ಪ್ರಾರಂಭ ಗೊಂಡಿತು.

ಈ ವಾರ್ಷಿಕ ವಿಶೇಷ ಶಿಬಿರವು 19/02/2026 ರಂದು ಶ್ರೀ ರಾಮಚಂದ್ರ ಪದವಿಪೂರ್ವ ವಿದ್ಯಾಲಯ ಅಯೋಧ್ಯಾ ನಗರ ಪೆರ್ನೆ ಇಲ್ಲಿ ಆಯೋಜಿಸಲಾಯಿತು.
ಈ ಕಾರ್ಯಕ್ರಮವನ್ನು ಶ್ರೀ ಹರೀಶ್ ಭಂಡಾರಿ ಟಿ, ವಕೀಲರು ಉಚ್ಚನ್ಯಾಯಾಲಯ, ಬೆಂಗಳೂರು ಸಂಚಾಲಕರು ಶ್ರೀ ರಾಮಚಂದ್ರ ವಿದ್ಯಾಲಯ ಅಯೋಧ್ಯಾ ನಗರ ಪೆರ್ನೆ ಇವರು ಉದ್ಘಾಟಿಸಿ ತಾವು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತಾವು ತಮ್ಮ ವಿದ್ಯಾರ್ಥಿ ಜೀವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಯಲ್ಲಿ ಪಲುಪಡೆದುಕೊಂಡರು ತಮ್ಮ ಶಾಲಾದಿನಗಳಲ್ಲಿ ತಮ್ಮ ಶಾಲೆಗೆ ಬಂದ ಶಿಬಿರಾರ್ಥಿಗಳೊಂದಿಗೆ ತಮ್ಮನು ತಾವು ತೊಡಗಿಸಿಕೊಂಡರುಮತ್ತು ಅವರಲ್ಲಾದ ಬದಲಾವಣೆಗಳ ಬಗೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡು ಕಾರ್ಯಕ್ರಮದ ಕುರಿತು ಶುಭನುಡಿಗಳನ್ನು ನುಡಿದರು.
ಈ ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀ ಜಯಂತ ನಡುಬೈಲು ಅಧ್ಯಕ್ಷರು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳು ಪುತ್ತೂರು, ಇವರು ತಮ್ಮ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟೀಯ ಸೇವಾ ಯೋಜನೆಯಲ್ಲಿದ್ದು ಉನ್ನತ ಮಟ್ಟದ ಸ್ಥಾನದಲ್ಲಿ ಇರುವುದರ ಬಗ್ಗೆ ಹೇಳಿ ಶಿಬಿರಾರ್ಥಿಗಳಿಗೆ ರಾಷ್ಟೀಯ ಸೇವಾ ಯೋಜನೆ ಬಗ್ಗೆ ಇನ್ನಷ್ಟು ವಿದ್ಯಾರ್ಥಿಗಳನ್ನು ಹುರಿದುಂಬಿಸುವಂತೆ ಹಾರೈಸಿದರು. ಅಂತೆಯೇ ಮುಖ್ಯ ಅತಿಥಿಗಳಾಗಿ ಶ್ರೀ ಶೇಖರ್ ರೈ ಕೆ ಪ್ರಾಂಶುಪಾಲರು ಶ್ರೀ ರಾಮಚಂದ್ರ ವಿದ್ಯಾಲಯ ಅಯೋಧ್ಯಾ ನಗರ ಪೆರ್ನೆ ಇವರು ತಮ್ಮ ಕಾಲೇಜ್ ನಲ್ಲಿ ನಡೆಯುವ ಮೊದಲ ಶಿಬಿರದ ಬಗೆಗೆ ಉತ್ಸಾಯಿ ನುಡಿಗಳನ್ನು ಹೇಳಿದರು ,ಶ್ರೀ ಸತ್ಯನಾರಾಯಣ ರೈ ಕೆ ಎಂ ಮುಖ್ಯಗುರುಗಳು ಶ್ರೀ ರಾಮಚಂದ್ರ ಪ್ರೌಢಶಾಲೆ ಅಯೋಧ್ಯಾ ನಗರ ಪೆರ್ನೆ ಇವರು ಅಕ್ಷಯ ಕಾಲೇಜಿನಂತಹ ಬೃಹತ್ ಸಂಸ್ಥೆಯು ತಮ್ಮ ಪ್ರೌಢ ಶಾಲೆಯನ್ನು ಆಯ್ಕೆಮಾಡಿಕೊಂಡು ಏಳು ದಿನಗಳ ಕಾಲ ಶಿಬಿರವನ್ನು ನೀಡಿ ನಮ್ಮ ಪ್ರೌಢ ಶಾಲೆಯ ಒಳಿತಿಗಾಗಿ ಶ್ರಮಿಸುವುದು ಪ್ರಶಂಸೆ ತಂದಿರಿಸಿದೆ ಎಂದು ಹೇಳಿದರು,

ಶ್ರೀ ಸಂಪತ್ ಕೆ ಪಕ್ಕಳ ಪ್ರಾಂಶುಪಾಲರು ಅಕ್ಷಯ ಕಾಲೇಜು ಪುತ್ತೂರು ಇವರು ತಮ್ಮ ಕಾಲೇಜಿನ ರಾಷ್ಟೀಯ ಸೇವಾ ಯೋಜನೆಯು 14 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡು ಇದೀಗ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡು ಇದೀಗ ಈ ವರ್ಷದ ವಾರ್ಷಿಕ ವಿಶೇಷ ಶಿಬಿರದಲ್ಲಿ ಸುಮಾರು ಎಪ್ಪತ್ತೈದಕ್ಕಿಂತ ಹೆಚ್ಚು ವಿದ್ಯಾರ್ಥಿಗಳ ಭಾಗವಹಿಸುವಿಕೆ ತುಂಬಾ ಹೆಮ್ಮೆಯ ವಿಷಯ ಎಂದು ಹಿತನುಡಿದರು,ವೇದಿಕೆಯಲ್ಲಿ ಅಕ್ಷಯ ಕಾಲೇಜಿನ ಆಡಳಿತ ನಿರ್ದೇಶಕಿ ಶ್ರೀಮತಿ ಕಲಾವತಿ ಜಯಂತ, ಆಡಳಿತ ಅಧಿಕಾರಿ ಶ್ರೀ ಅರ್ಪಿತ್ ಟಿ ಎ ಉಪಸ್ಥಿತರಿದ್ದರು. ಶಿಬಿರಾಧಿಕಾರಿಯಾದ ಶ್ರೀ ರಾಕೇಶ್ ಕೆ ಇವರು ರಾಷ್ಟೀಯ ಸೇವಾ ಯೋಜನೆಯ ಬಗ್ಗೆ ಪ್ರಸ್ತಾವಿಕ ಭಾಷಣ ನುಡಿದರು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಪ್ರಾರ್ಥಿಸಿದರು, ಶಿಬಿರಾಧಿಕಾರಿಯಾದ ಕು ಮೇಘಶ್ರೀ ಸ್ವಾಗಸಿ, ಘಟಕ 1 ರ ನಾಯಕನಾದ ಸುಹಾಸ್ ಇವರು ವಂದಿಸಿ ಸ್ವಯಂಸೇವಕಿ ವಿಂಧುಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು, ತದನಂತರ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮವು ನಡೆಯಿತು.
