ಪುತ್ತೂರು : ಅಕ್ಷಯ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಬಿಎಚ್ ಎಸ್ ವಿಭಾಗ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ ಹಾಸ್ಪಿಟಲಿಟಿ ಕ್ಲಬ್ ನ ಉದ್ಘಾಟನೆಯು ಕಾಲೇಜಿನ ಆವರಣದಲ್ಲಿ ನಡೆಯಿತು.
ಮುಖ್ಯ ಅಥಿತಿಯಾಗಿ ಭಾಗವಹಿಸಿದ ಶ್ರೀ ಹೋಟೆಲ್ ಪುತ್ತೂರಿನ ಮಾಲಕರಾದ ಶ್ರೀಯುತ ತೇಜಸ್ ಕಾರ್ಯಕ್ರಮವನ್ನುಉದ್ಘಾಟಿಸಿ, ನೂತನ ಲಾಂಛನವನ್ನು ಅನಾವರಣಗೊಳಿಸಿಮಾತನಾಡಿದರು.ಹೋಟೆಲ್ ಮತ್ತು ಆತಿಥ್ಯ ಉದ್ಯಮವು ವೇಗವಾಗಿ ಬೆಳೆಯುತ್ತಿರುವ ಉದ್ಯಮ ಕ್ಷೇತ್ರ ವಾಗಿದ್ದು ವೃತ್ತಿ ಪರ ಶಿಕ್ಷಣಗಳಿಸಿದ ವಿದ್ಯಾರ್ಥಿಗಳಿಗೆ ದೇಶ ಮತ್ತು ವಿದೇಶದಲ್ಲಿ ಸಾಕಷ್ಟು ಬೇಡಿಕೆ ಇದೆ.
ಹಾಸ್ಪಿಟಾಲಿಟಿ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ಆತಿಥ್ಯ-ಸಂಬಂಧಿತ ಉದ್ಯೋಗಗಳಲ್ಲಿ ಕೆಲಸ ಮಾಡಲು ಅಗತ್ಯವಿರುವ ಕೌಶಲ್ಯ ಮತ್ತು ಜ್ಞಾನವನ್ನು ಕಲಿಸುವ ವಿಶೇಷ ಪದವಿಯಾಗಿದೆ. ಈವೆಂಟ್‌ಗಳನ್ನು ಆಯೋಜಿಸುವುದು, ಪ್ರಯಾಣ ,ಉದ್ಯಮ ಮತ್ತು ಗ್ರಾಹಕರಿಗೆ ಸಹಾಯ ಮಾಡುವಂತಹ ಆತಿಥ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹಾಸ್ಪಿಟಲಿಟಿ ಸಾಯನ್ಸ್ ಪದವಿಯ ವ್ಯಾಪ್ತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ಯನ್ನು ವಹಿಸಿದ ಕಾಲೇಜಿನ ಅಧ್ಯಕ್ಷರಾದ ಶ್ರೀಯುತ ಜಯಂತ್ ನಡುಬೈಲ್ ಇವರು ಹೋಟೆಲ್ ಮ್ಯಾನೇಜ್ಮೆಂಟ್ ಎಂಬುದು ಸಾಮಾನ್ಯ ಪದವಿಯಲ್ಲ, ಇದಕ್ಕೆ ದೇಶ ವಿದೇಶದಲ್ಲೂ ಧಾರಾಳ ಬೇಡಿಕೆ ಇದೆ. ಕನಿಷ್ಟ ಶುಲ್ಕದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನಮ್ಮ ಸಂಸ್ಥೆಯಲ್ಲಿ ಬಿ ಎಚ್ ಎಸ್ ಪದವಿಯನ್ನು ನೀಡಲಾಗುತ್ತದೆ . ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಬಿ ಎಚ್ ಎಸ್ ವಿಭಾಗವು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮುಂದಿನ ಅಧ್ಯಯನ ವರ್ಷದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಈ ಪದವಿಯ ಅನುಕೂಲ
ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕ್ಲಬ್ ಗೆ ಸಂಬಂಧಪಟ್ಟಂತೆ ವಿವಿಧ ಜವಾಬ್ದಾರಿಗಳನ್ನು ವಿದ್ಯಾರ್ಥಿಗಳಿಗೆ ನೀಡಿ
ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸಂಪತ್ ಕೆ ಪಕ್ಕಳ, ಆಡಳಿತಾಧಿಕಾರಿ ಶ್ರೀ ಅರ್ಪಿತ್ ಟಿ. ಎ,ಉಪ ಪ್ರಾಂಶುಪಾಲರಾದ ಶ್ರೀ ರಕ್ಷಣ್ ಟಿ ಆರ್, ಬಿ ಎಚ್ ಎಸ್ ವಿಭಾಗದ ಮುಖ್ಯಸ್ಥ ಶ್ರೀ ರತ್ನಾಕರ ಪ್ರಭು , ಬಿ ಎಚ್ ಎಸ್ ವಿಭಾಗದ ಸಹ ಪ್ರಾಧ್ಯಾಪಕಿ ಶ್ರತ , ಭೋದಕ ಮತ್ತು ಭೋದಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡರು. ಬಿ . ಎಚ್ ಎಸ್ ವಿಭಾಗದ ವಿದ್ಯಾರ್ಥಿನಿ ರಾದ , ಚಿತ್ರ, ರಶೀಕ ಮತ್ತು ಪ್ರತೀಕಾ ಪ್ರಾರ್ಥಿಸಿದರು . ವಿದ್ಯಾರ್ಥಿ ಗಳಾದ ಸಿಂಚನ್ ಸ್ವಾಗತಿಸಿ, ನಂದನ್ ವಂದಿಸಿದರು. ಕುಮಾರಿ ಬಿಂದು ಶ್ರೀ ಮತ್ತು ಕುಮಾರಿ ಗೀತಾ ಕಾರ್ಯಕ್ರಮವನ್ನು ನಿರೂಪಿಸಿದರು .