ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ಬಿಂದು ಫೊಟೊಗ್ರಫಿ ಕ್ಲಬ್ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ನ.25 ರಂದು ’ಬೇಸಿಕ್ಸ್ ಆಫ್ ಫೋಟೋಗ್ರಾಫಿ’ ಎಂಬ ಕಾರ್ಯಾಗಾರವನ್ನು ನಡೆಸಲಾಯಿತು.

ಸಂಘದ ಸಂಯೋಜಕಿಯಾದ ಕಾವ್ಯ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾದ ಖ್ಯಾತ ಛಾಯಾಗ್ರಾಹಕ ಮುರಳೀಧರ ಕೆ ರಾಯರಮನೆ ದೀಪ ಬೆಳಗಿಸಿದರು ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಗುರುತಿಸಿದರು.
ಛಾಯಾಗ್ರಹಣದ ಮೂಲಭೂತಗಳ ಬಗ್ಗೆ ಮಾತನಾಡುತ್ತಾ ಮುರಳೀಧರ ಕೆ ರಾಯರಮನೆ ಅವರು ಛಾಯಾಗ್ರಹಣದ ಅಂಶಗಳಾದ ಬೆಳಕು, ಕ್ಯಾಮೆರಾ, ಚಿತ್ರರಚನೆ, ಮತ್ತು ಲೆನ್ಸ್ ಇವುಗಳು ಚಿತ್ರವನ್ನು ಸೆರೆಹಿಡಿಯುವ ಪ್ರಕ್ರಿಯೆಯ ಬಗ್ ಗೆತಿಳಿಸಿದರು. ಬೆಳಕಿನ ದಿಕ್ಕನ್ನು ನಿಯಂತ್ರಿಸುವುದು, ಅಪರ್ಚರ್ (ಗಾಳಿಯ ರಂಧ್ರ), ಶಟರ್ ಸ್ಪೀಡ್ (ಶಟರ್ ವೇಗ), ಮತ್ತು ISO (ಐಎಸ್‌ಓ ಸಂವೇದನಶೀಲತೆ) ಅನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದರು. ಹಾಗೂ ವಿವಿಧ ರೀತಿಯ ಕ್ಯಾಮೆರಾಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿ ವಿವರಿಸಿದರು. ಕೊನೆಯಲ್ಲಿ ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಂದ ಛಾಯಾಗ್ರಹಣ ಮಾಡಿಸಿದರು.
ಐಕ್ಯೂಎಸಿ ಇದರ ಸಂಯೋಜಕಿಯಾದ ರಶ್ಮಿ, ಬಿಂದು ಇದರ ಸದಸ್ಯರಾದ ಸಂತೋಷ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬಿಂದು ಇದರ ಅಧ್ಯಕ್ಷರಾದ ಮಿಲನ್ ಇವರು ಇವರು ಸ್ವಾಗತಿಸಿ, ಬಿಂದು ಕಾರ್ಯದರ್ಶಿಯಾದ ಕುಮಾರಿ ಅಫೀಜಾ ಇವರು ಧನ್ಯವಾದ ಸಮರ್ಪಣೆ ಮಾಡಿದರು.
ಬಿಂದು ಇದರ ಸದಸ್ಯೆಯಾದ ಜೆನಿಫರ್ ಡಿಸೋಜ ಇವರು ಕಾರ್ಯಕ್ರಮ ನಿರೂಪಣೆ ಹಾಗೂ ಮುಖ್ಯ ಅತಿಥಿಗಳ ಪರಿಚಯವನ್ನು ತಿಳಿಸಿಕೊಟ್ಟರು. ಪ್ರಕೃತಿ ಇವರು ಪ್ರಾರ್ಥನೆ ಮಾಡಿದರು.