ಅಕ್ಷಯ ಕಾಲೇಜು ಪುತ್ತೂರು ಇದರ ವಾಗ್ವೈಭವ ಸಂಸ್ಕೃತ ಸಂಘದಿಂದ ಗೀತಾ ಜಯಂತಿ ಪ್ರಯುಕ್ತ ಆಯೋಜಿಸಲಾದ ಬಹುಮಾನ ವಿತರಣಾ ಕಾರ್ಯಕ್ರಮವು ಸುಸೂತ್ರವಾಗಿ ನಡೆಯಿತುಮೊದಲಿಗೆ ದೇವತಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು.

ಪ್ರಕೃತಿ ಫೈನಲ್ ಬಿ ಎಸ್ ಸಿ ಎಫ್ ಡಿ ಗೌತಮಿ ಪ್ರಥಮ ಬಿ ಎಸ್ ಸಿ ಎಫ್ ಡಿ ಮತ್ತು ರಿಷಿತ ಪ್ರಥಮ ಬಿಕಾಂ ಇವರು ದೇವತಾ ಪ್ರಾರ್ಥನೆಯನ್ನು ಸಲ್ಲಿಸಿದರು ಆನಂತರ ಅವಿಷ್ ಎಸ್ ಶೆಟ್ಟಿ ಸ್ವಾಗತ ಭಾಷಣವನ್ನು ನೀಡಿದರು ನಂತರ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ವೇದವ್ಯಾಸ ರಾಮಕುಂಜ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಅಕ್ಷಯ ಕಾಲೇಜ್ ಪ್ರಾಂಶುಪಾಲರಾದ ಸಂಪತ್ ಕೆ ಪಕ್ಕಳ ಮತ್ತು ಅಕ್ಷಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕುಮಾರಿ ಗಂಗರತ್ನ ಇವರು ಮತ್ತು ಸಂಸ್ಕೃತ ಸಂಘದ ಸಂಯೋಜಕಿಯಾದ ಶ್ರೀಮತಿ ಸಾಯಿ ಕೃಪಾ ಕೆ ಇವರು ಭಗವದ್ಗೀತೆಗೆ ಪುಷ್ಪಾರ್ಚನೆಯನ್ನು ಸಲ್ಲಿಸಿದರು. ಅಲ್ಲದೆ ಶ್ರೀಮತಿ ಸಾಯಿ ಕೃಪಾ ಕೆ ಪ್ರಸ್ತಾವಿಕ ಮಾತುಗಳನ್ನಾಡಿದರು.ಬಳಿಕ ಮಾತನಾಡಿದ ಅತಿಥಿ ಶ್ರೀ ವೇದವ್ಯಾಸ ರಾಮಕುಂಜಾ ಇವರು ಭಗವದ್ಗೀತೆಯ ಮತ್ತು 18 ಸಂಖೆಯ ಮಹತ್ವವನ್ನು ವಿಮರ್ಶಿಸಿದರು.
ಹಾಗೆಯೇ ಮುಖ್ಯಾತಿಥಿಯಾದ ಗಂಗರತ್ನ ಇವರು ಸಂಸ್ಕೃತ ಮತ್ತು ಭಗವದ್ಗೀತೆಯ ಪ್ರಾಮುಖ್ಯತೆಯನ್ನು ವಿವರಿಸಿ ದರು ಅಕ್ಷಯ ಕಾಲೇಜ್ ಪ್ರಾಂಶುಪಾಲರಾದ ಸಂಪತ್ ಕೆ ಪಕ್ಕಳ ಅವರು ಸಂಸ್ಕೃತದಿಂದಲೇ ಎಲ್ಲಾ ಭಾಷೆಗಳು ಉತ್ಪತ್ತಿಗೊಂಡಿವೆ ಮತ್ತು ಶ್ರೀಕೃಷ್ಣನೇ ಮೊದಲ ಮನಶಾಸ್ತ್ರ ಜ್ಞ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು
ವಿಜೇತರಿಗೆ ನಗದು ಬಹುಮಾನ ಮತ್ತು ಭಗವದ್ಗೀತೆಯ ಪುಸ್ತಕವನ್ನು ನೀಡಲಾಯಿತು.ಬಹುಮಾನ ವಿಜೇತರ ಹೆಸರನ್ನು ಅಕ್ಷಿತ್ ಕೆ ಆರ್ ಸಂಸ್ಕೃತ ಸಂಘದ ಅಧ್ಯಕ್ಷರು ಘೋಷಿಸಿದರು ವಿಜೇತರು ಬಂದು ಬಹುಮಾನ ಸ್ವೀಕರಿಸಿದರು. ಕೊನೆಯದಾಗಿ ಯಶಸ್ವಿ ಬಿ ಕೆ ಸಂಸ್ಕೃತ ಸಂಘದ ಜೊತೆ ಕಾರ್ಯದರ್ಶಿ ಧನ್ಯವಾದ ಗಳನ್ನು ಸಮರ್ಪಿಸಿದರು. ಸಂಸ್ಕೃತ ಸಂಘದ ಕಾರ್ಯದರ್ಶಿಯಾದ ಅಪೇಕ್ಷ ಕೆ ಜೆ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು
