ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆ ಯಲ್ಲಿ ಸಂಭ್ರಮದಿಂದ ಓಣಂ ಹಬ್ಬ ವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಸಂತೋಷ್ ಕುಮಾರ್ ಜೆ. ಪಿ. ಮುರ. ಪುತ್ತೂರು ತೀಯಾ ಸಮಾಜ (ರಿ ) ಇದರ ಅಧ್ಯಕ್ಷರು, ಬಿ ಎಂ ಮಾಧವ , ಕರ್ನಾಟಕ ರಾಜ್ಯ ಬ್ಯಾಂಕ್ ನೌಕರರ ಒಕ್ಕೂಟದ ಉಪಾಧ್ಯಕ್ಷರು ಮತ್ತು ಶ್ರೀಮತಿ ಸೋಫಿ ಕೃಷ್ಣನ್ ಪ್ರಾದೇಶಿಕ ಪ್ರಬಂಧಕರು ಕೆನರಾ ಬ್ಯಾಂಕ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾಲೇಜಿನಿಂದ ಸಂಪ್ಯದ ವರೆಗೆ ಆಯೋಜಿಸಿದ್ದ ಸಿಂಗಾರಿ ಮೇಳದೊಂದಿಗಿನ ಮೆರವಣಿಗೆಯಲ್ಲಿ ಗಣ್ಯರು, ವಿದ್ಯಾರ್ಥಿಗಳು ಪಾಲ್ಗೊಂಡರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮುಖ್ಯ ಅತಿಥಿ ಶ್ರೀಯುತ ಬಿ ಎಂ ಮಾಧವ ಮಾತನಾಡಿ, ಓಣಂ ಕೇರಳದ ಸಾಂಸ್ಕೃತಿಕ ಮತ್ತು ಸುಗ್ಗಿ ಹಬ್ಬ . ಮಾತ್ರವಲ್ಲ , ಪ್ರಕೃತಿ ಜೊತೆಗಿನ ಅವಿನಾಭಾವ ಸಂಬಂಧವನ್ನು ಬೆಸೆಯುವ ಹಬ್ಬವಾಗಿದೆ. ಪ್ರಕೃತಿಯು ರಮಣೀಯತೆ ಹಾಗೂ ಸಮೃದ್ಧ ಫಸಲಿ ನಿಂದ ಕಂಗೊಳಿಸುವ ಈ ಸಂದರ್ಭದಲ್ಲಿ ಜನರು ಐಕ್ಯತೆಯಿಂದ ಶಾಂತಿ ನೆಮ್ಮದಿಯ ಮತ್ತು ಸಮೃದ್ಧಿಯ ಪ್ರತೀಕವಾಗಿ ಹಬ್ಬ ವನ್ನು ನಾಡಿನೆಲ್ಲೆಡೆ ವಿಜ್ರಂಭಣೆಯಿಂದ ಆಚರಿಸುತ್ತಾರೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂತೋಷ್ ಕುಮಾರ್ ಜೆ. ಪಿ. ಮುರ. ಮಾತನಾಡಿ ನಮ್ಮ ನೆರೆ ರಾಜ್ಯ ಕೇರಳದ ಜನತೆಯೊಂದಿಗೆ ದೇಶ, ವಿದೇಶಗಳಲ್ಲಿ ಓಣಂ ಹಬ್ಬವನ್ನು
ಪೂಕಳಂನ್ನು ಹಾಕಿ ವಿವಿಧ ಸಾಂಸ್ಕೃತಿಕ,ಕ್ರೀಡಾ ಕೂಟದೊಂದಿಗೆ ಆಚರಿಸಿ, ಸಾಂಪ್ರದಾಯಿಕ ವಿಶೇಷ ಭಕ್ಷ್ಯಗಳೊಂದಿಗೆ ಕುಟುಂಬದ ಎಲ್ಲಾ ಸದಸ್ಯರು ಒಟ್ಟಾಗಿ ಆಹಾರವನ್ನು ಸವಿಯುತ್ತಾ ಸಂಭ್ರಮಿಸುವ ಹಬ್ಬವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಜಯಂತ್ ನಡುಬೈಲ್ ಮುಂಗಾರಿನ ಮಳೆ ಕೊನೆಗೊಳ್ಳುವ ಮತ್ತು ಹಚ್ಚ ಹಸಿರಿನ ಮಧ್ಯೆ ಭತ್ತದ ಪೈರಿನ ಸಮೃದ್ಧಿಯ ಕಾಲದಲ್ಲಿ ಓಣಂ ಹಬ್ಬವನ್ನು ಜಾತಿ- ಮತ ಬಡವ -ಬಲ್ಲಿದ ಎಂಬ ಭೇದ ಭಾವವಿಲ್ಲದೆ ಆಚರಿಸಲಾಗುತ್ತದೆ. ಅತ್ಯಂತ ಅಗಾಧವಾದ ಜೀವನ ಮೌಲ್ಯಗಳನ್ನು ಸಾರುವ ಈ ಹಬ್ಬವನ್ನು ಆಚರಿಸಿವುದರ ಮೂಲಕ ಸೌಹಾರ್ದತೆಗೆ ವೇದಿಕೆ ಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಆಡಳಿತ ಮಂಡಳಿಯ ನಿರ್ದೇಶಕಿ ಶ್ರೀಮತಿ ಕಲಾವತಿ ಜಯಂತ್ , ಆಡಳಿತ ಮಂಡಳಿಯ ಸದಸ್ಯರಾದ ಪಿ. ವಿ ನಾರಾಯಣನ್, ಪ್ರಾಂಶುಪಾಲರಾದ ಶ್ರೀ ಸಂಪತ್ ಕೆ ಪಕ್ಕಳ, ಆಡಳಿತಾಧಿಕಾರಿ ಶ್ರೀ ಅರ್ಪಿತ್ ಟಿ ಆರ್ ಅಕ್ಷಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ ಶ್ರೀಮತಿ ರಶ್ಮಿತ ಸ್ವಾಗತಿಸಿ, ಶ್ರೀಮತಿ ರಶ್ಮಿ ಕೆ ವಂದಿಸಿದರು. ಉಪನ್ಯಾಸಕ ರಾಕೇಶ್ ಕುಳದಪಾರೆ ಕಾರ್ಯಕ್ರಮ ನಿರೂಪಿಸಿದರು. .
ನ್ಯೂಸ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ
ಜನಮಿತ್ರ ನ್ಯೂಸ್ :https://janamitra.co/puttur-onam-festival-celebrateds-at-akshaya-college/