ಪುತ್ತೂರು, ಆಗಸ್ಟ್ 16: ಸಂಪ್ಯಧಲ್ಲಿ ಇರುವ ಅಕ್ಷಯ ಪದವಿ ಕಾಲೇಜ್ನಲ್ಲಿ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಲಯನ್ ಕ್ಲಬ್ ಪುತ್ತೂರ್ದ ಮುತ್ತು ಲಿಯೋ ಕ್ಲಬ್ ನಿಯೋಸ್ ಅಕ್ಷಯನ್ಸ್ ಸ್ಥಾಪನಾ ಸಮಾರಂಭ ಶನಿವಾರ ಜರುಗಿತು. ಈ ಕಾರ್ಯಕ್ರಮವು ಯುವ ನಾಯಕತ್ವ ಮತ್ತು ಸಮುದಾಯ ಸೇವಾ ಚಟುವಟಿಕೆಗಳಿಗೆ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು.
ಸಮಾರಂಭವನ್ನು ಸ್ಥಾಪನಾ ಅಧಿಕಾರಿ ಡಾ. ಮೆಲ್ವಿನ್ ಡಿಸೋಜಾ ನೆರವೇರಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಪ್ರತಿಷ್ಠಾಪಿಸಿದರು. ಈ ವೇಳೆ ಲಿಯೋ ಪುತ್ತೂರ್ದ ಮುತ್ತು ಅಧ್ಯಕ್ಷೆ ವೇದಾವತಿ, ಲಿಯೋ ರಂಜಿತಾ, ಹಾಗೂ ಪ್ರಾದೇಶಿಕ ಅಧ್ಯಕ್ಷ ಆನಂದ್ ರೈ ಸೇರಿದಂತೆ ಗಣ್ಯರು ಉಪಸ್ಥಿತರಿದ್ದು, ಪ್ರೋತ್ಸಾಹದ ಸಂದೇಶಗಳನ್ನು ನೀಡಿದರು.
ಇದೆ ಕಾರ್ಯಕ್ರಮದಲ್ಲಿ ಡಾ. ಮೆಲ್ವಿನ್ ಡಿಸೋಜಾ ಅವರಿಗೆ ಸನ್ಮಾನ ಮಾಡಲಾಯಿತು. ಅದೇ ರೀತಿ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ., ಉಪ ಪ್ರಾಂಶುಪಾಲ ರಕ್ಷಣ್ ಟಿ.ಆರ್. ಹಾಗೂ ಲಿಯೋ ಕ್ಲಬ್ ಸಂಯೋಜಕ ಅವಿನಾಶ್ ಕೆ.ಆರ್. ಅವರು ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಈ ಸಮಾರಂಭವು “ನಾಯಕತ್ವ, ಅನುಭವ, ಅವಕಾಶ ” ಎಂಬ ಲಿಯೋ ಮೌಲ್ಯಗಳನ್ನು ಪ್ರಸ್ತುತಪಡಿಸಿ, ಮುಂಬರುವ ವರ್ಷದಲ್ಲಿ ಯುವ ಸದಸ್ಯರಿಂದ ಸಮುದಾಯ ಸೇವೆ ಮತ್ತು ನಾಯಕತ್ವ-ವಿಕಸನ ಚಟುವಟಿಕೆಗಳಲ್ಲಿ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಪ್ರೇರೇಪಿಸಿತು.
ಲಿಯೋ ಸಂಘದ ನೂತನ ಅಧ್ಯಕ್ಷ ರಾಗಿ ಕೂ. ಪ್ರತೀಕ, ಕಾರ್ಯದರ್ಶಯಾಗಿ ಕು. ಕಿಶನ್, ಖಚಾಂಚಿಯಾಗಿ ಕು. ರಶಿಕಾ ಆರ್ ನೇಮಕಗೊಂಡರು. ಈ ಕಾರ್ಯಕ್ರಮವನ್ನು ಸಂಘದ ಮಾಜಿ ಅಧ್ಯಕ್ಷರಾದ ಕು. ರಶ್ವಿನ್ ಸ್ವಾಗತಿಸಿ, ಕು. ಕಿಶನ್ ವಂದಿಸಿ, ಕು. ರಮ್ ಝೀ ನ ನಿರೂಪಿಸಿದರು
ನ್ಯೂಸ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ :
ವೀಕ್ಷಕವಾಣಿ : https://veekshakavani.com/puttur-leo-club-nios-akshayans-to-be-set-up-a-new-arena-for-young-leadership/
ಅಮರ ಸುದ್ದಿ : https://amarasuddi.com/2025/08/24/akshaya-collage-2/