ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟದ ಪ್ರತಿಜ್ಞಾ ವಿಧಿ ಸ್ವೀಕಾರ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶ್ರೀಯುತ ಸೀತಾರಾಮ ಕೀವಳ ನಿವೃತ್ತ ಪ್ರಾಂಶುಪಾಲರು ವಿದ್ಯಾರಶ್ಮಿ ವಿದ್ಯಾಲಯ ಸವಣೂರು ಮಾತನಾಡಿ ನಮ್ಮ ಜೀವನದಲ್ಲಿ ನಾವು ಹೇಗಿರಬೇಕು ? ಮತ್ತು ಏನಾಗ ಬೇಕು ? ಎಂದು ನಾವೇ ತೀರ್ಮಾನಿಸ ಜೀವನದಲ್ಲಿ ಲಭಿಸುವ ಅವಕಾಶವನ್ನು ಅತ್ಯಂತ ಶ್ರದ್ಧೆಯಿಂದ ಮತ್ತು ನಂಬಿಯಿರಿಸಿ ಮಾಡಿದಲ್ಲಿ ಮಾತ್ರ ನಮ್ಮ ಜೀವನದ ಲಕ್ಷ್ಯವನ್ನು ಸಾಧಿಸ ಬಹುದು, ಶಾಲಾ- ಕಾಲೇಜಿನ ವಿದ್ಯಾರ್ಥಿ ದೆಸೆ ಯಲ್ಲಿ ನಾಯಕತ್ವದ ಅವಕಾಶಗಳನ್ನು ಪಡೆದವರು ಮುಂದಿನ ಜೀವನದಲ್ಲಿ ಜನ ಪ್ರತಿನಿಧಿ ಗಳಾಗಿ ಗುರುತಿಸಿಕೊಂಡವರು ಅನೇಕರಿದ್ದಾರೆ. ನಮ್ಮ ಯಶಸ್ಸಿಗೆ ಸಂಬಂಧಿಸಿದಂತೆ ಶಿಕ್ಷಣಕ್ಕೆ ಮಾಡುವ ಹೂಡಿಕೆ ಒಂದು ಸಣ್ಣ ಭಾಗ, ಬಹುತೇಕ ಹೂಡಿಕೆ ಜೀವನದ ಮೌಲ್ಯಗಳನ್ನು ಗಳಿಸುವಲ್ಲಿ ನಾವು ಮಾಡಬೇಕು. ವೈಜ್ಞಾನಿಕ ಮತ್ತು ಸತ್ಯವನ್ನು ಕಂಡುಕೊಂಡು ನಮ್ಮ ಜೀವನದ ಸವಾಲುಗಳಿಗೆ ಅತ್ಯಂತ ನಿಖರವಾದ ಪರಿಹಾರಗಳನ್ನು ಕಂಡುಕೊಳ್ಳಲು ನಾವು ಸಮರ್ಥವಾಗಿರಬೇಕು. ನಮ್ಮ ಜೀವನದ ದಿಸೆಯನ್ನು ಪ್ರಗತಿಯತ್ತ ಕೊಂಡೊಯ್ಯಲು ಧನಾತ್ಮಕ ಚಿಂತನೆ ಗಳನ್ನು ಯಥಾವತ್ತಾಗಿ ರೂಢಿಸಿಕೊಳ್ಳ ಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಅಧ್ಯಕ್ಷರಾದ ಶ್ರೀಯುತ ಜಯಂತ್ ನಡುಬೈಲ್ ವಿದ್ಯಾರ್ಥಿ ಒಕ್ಕೂಟ ವನ್ನು ಉದ್ದೇಶಿಸಿ, ವಿದ್ಯಾರ್ಥಿ ಪ್ರತಿನಿಧಿಗಳು ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡುವ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಪಂದಿಸುತ್ತಾ, ವಿದ್ಯಾರ್ಥಿಗಳ ಧ್ವನಿಯಾಗಿರ ಬೇಕು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸುತ್ತಾ, ಬೇಡಿಕೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರಬೇಕು ಆ ಮೂಲಕ ವಿದ್ಯಾರ್ಥಿಗಳ ಮಾನಸಿಕ ಸ್ವಾಸ್ಥ್ಯ, ಉತ್ತಮ ಕಲಿಕಾ ಪರಿಸರ ನಿರ್ಮಾಣಕ್ಕೆ ಪ್ರಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ ಅಕ್ಷಯ್ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಶುಭ ಹಾರೈಸಿ, ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿ, ವಿದ್ಯಾರ್ಥಿಗಳಿಗೆ ನೀಡಿದ ಭರವಸೆ ಗಳನ್ನು ಯಥಾವತ್ತಾಗಿ ಪಾಲಿಸಿ ಆದರ್ಶ ವಿದ್ಯಾರ್ಥಿ ನಾಯಕ- ನಾಯಕಿಯರಾಗಿ ಹೊರ ಹೊಮ್ಮ ಬೇಕು ಎಂದು ಕರೆ ನೀಡಿದರು.
2025- 26 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷನಾಗಿ ಅಂತಿಮ ಆಂತರಿಕ ವಿನ್ಯಾಸ ವಿಭಾಗದ ರಾಕೇಶ್, ಕೆ. ಉಪಾಧ್ಯಕ್ಷನಾಗಿ ಮನೋಜ್ ಕುಮಾರ್ ಅಂತಿಮ ಪದವಿ ಬಿ ಸಿ ಎ. ಕಾರ್ಯದರ್ಶಿ ವರ್ಷಿಣಿ ಎನ್. ಎಸ್ ಅಂತಿಮ ಪದವಿ ವಾಣಿಜ್ಯ ವಿಭಾಗ, ಜೊತೆ ಕಾರ್ಯದರ್ಶಿಯಾಗಿ ಖಲಂದರ್ ಶಮಾ ಫ್ಯಾಷನ್ ಡಿಸೈನ್ ವಿಭಾಗ, ಖಜಾಂಚಿ ಯಾಗಿ ಪೃಥ್ವಿರಾಜ್, ಪಿ ಅಂತಿಮ ಪದವಿ ಬಿ ಸಿ ಎ, ಜೊತೆ ಖಜಾಂಚಿ ಯಾಗಿ ಅಪೇಕ್ಷಾ ಕೆ ಶೆಟ್ಟಿ ದ್ವಿತೀಯ ಪದವಿ ಬಿಸಿಎ, ಸಾಂಸ್ಕೃತಿಕ ಕಾರ್ಯದರ್ಶಿ ಯಾಗಿ ಕೀರ್ತನ್ ಕೃಷ್ಣ ಪಿ ಡಿ ಅಂತಿಮ ಪದವಿ ಬಿ ಸಿ ಎ, ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ ಯಾಗಿ ರಕ್ಷಾ ಕೆ ಆರ್ ದ್ವಿತೀಯ ಪದವಿ ಬಿಸಿ ಎ, ಕ್ರೀಡಾ ಕಾರ್ಯದರ್ಶಿ ಯಾಗಿ ಧನುಷ್ ಡಿ. ಎಸ್ ಅಂತಿಮ ಪದವಿ ಬಿ ಸಿ ಎ, ಜೊತೆ ಕ್ರೀಡಾ ಕಾರ್ಯದರ್ಶಿ ಯಾಗಿ ಆಶಿಕಾ ಎನ್ ದ್ವಿತೀಯ ವಾಣಿಜ್ಯ ವಿಭಾಗ, ಮಾಧ್ಯಮ ಕಾರ್ಯದರ್ಶಿ ಯಾಗಿ ವಿಂಧು ಶ್ರೀ ಅಂತಿಮ ಪದವಿ ವಾಣಿಜ್ಯ ವಿಭಾಗ ಮತ್ತು ಫ್ಲೋಯಿಡನ್ ಲೋಬೋ ದ್ವಿತೀಯ ಪದವಿ ಹಾಸ್ಪಿಟಲಿಟಿ ಸಾಯನ್ ಪ್ರಮಾಣ ವಚನ ಸ್ವೀಕರಿಸಿದರು,
ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಶ್ರೀಯುತ ಅಶೋಕ್ ರೈ ಎಂ ನೂತನ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು, ಪ್ರಾಂಶುಪಾಲ ರಾದ ಶ್ರೀ ಸಂಪತ್ ಕೆ ಪಕ್ಕಳ, ಆಂತರಿಕ ಗುಣಮಟ್ಟ ಭರವಸೆಯ ಕೋಶದ ಸಂಯೋಜಕ ರಾದ ಶ್ರೀಮತಿ ರಶ್ಮಿ ಕೆ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಶ್ರೀ ಅರ್ಪಿತ್ ಟಿ, ಎ. ಸ್ವಾಗತಿಸಿ, ಉಪ ಪ್ರಾಂಶುಪಾಲರಾದ ಶ್ರೀಯುತ ರಕ್ಷಣ್ ಟಿ ಆರ್ ಧನ್ಯವಾದ ಸಮರ್ಪಿಸಿದರು. ದ್ವಿತೀಯ ಫ್ಯಾಷನ್ ಡಿಸೈನ್ ವಿಭಾಗದ ವಿದ್ಯಾರ್ಥಿನಿ ಗಳಾದ ಕುಮಾರಿ ಮೋಕ್ಷ ಮತ್ತು ದೇವಿಕಾ ಪ್ರಾರ್ಥನೆ ಹಾಡಿದರು. ಕನ್ನಡ ವಿಭಾಗದ ಉಪನ್ಯಾಸಕಿ ಶ್ರೀಮತಿ ರಶ್ಮಿತಾ ಕಾರ್ಯಕ್ರಮವನ್ನು ನಿರೂಪಿಸಿದರು.
ನ್ಯೂಸ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ :
ವೀಕ್ಷಕವಾಣಿ : https://veekshakavani.com/pragyanam-sanskrit-training-for-students-at-akshaya-college/
ಸುದ್ದಿ ನ್ಯೂಸ್ ಪುತ್ತೂರು : https://puttur.suddinews.com/archives/910627
ನ್ಯೂಸ್ ಪುತ್ತೂರು : https://newsputtur.com/2025/08/20/akshaya-college-student-council-3/