ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ 79 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಾಲೇಜಿನ ಅಧ್ಯಕ್ಷರಾದ ಶ್ರೀಯುತ ಜಯಂತ್ ನಡುಬೈಲ್ ಧ್ವಜಾರೋಹಣ ನೆರವೇರಿಸಿ ಸಮಾರಂಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸ್ವಾತಂತ್ರ್ಯಹೋರಾಟದಲ್ಲಿ ಭಾಗಿಯಾಗಿ ತಮ್ಮ ಜೀವನವನ್ನು ತ್ಯಾಗ , ಬಲಿದಾನ ಮಾಡಿದ , ಭಗತ್ ಸಿಂಗ್, ವೀರ ಸಾವರ್ಕರ್ , ಸುಭಾಷ್ ಚಂದ್ರ ಬೋಸ್, ಅಹಿಂಸಾ ತತ್ವದಲ್ಲಿ ಅನೇಕ ಚಳುವಳಿಗಳ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಚುಕ್ಕಾಣಿ ಹಿಡಿದ ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿ, ಸ್ವತಂತ್ರ ಭಾರತದ ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ ಮೊದಲಾದ ಮಹನೀಯರನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ನಿಸ್ವಾರ್ಥ ಸೇವೆ, ಅವರ ದೇಶ ಪ್ರೇಮ ನಮಗೆಲ್ಲರಿಗೂ ಆದರ್ಶ. ನನ್ನ ದೇಶ ನನ್ನ ಹೆಮ್ಮೆ ಎಂಬ ರಾಷ್ಟ್ರ ಪ್ರೇಮ, ರಾಷ್ಟ್ರ ಭಕ್ತಿಯಿಂದ , ನಮ್ಮ ರಾಷ್ಟ್ರ ಕ್ಕೆ ಸುರಕ್ಷತೆ ನೀಡುವಲ್ಲಿ ನಮ್ಮ ಯೋಧರನ್ನು, ದೇಶಕ್ಕೆ ಅನ್ನ ನೀಡುವ ನಮ್ಮ ರೈತ ರನ್ನು ನಾವು ಸದಾ ಗೌರವಿಸ ಬೇಕು.
ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆ, ಭ್ರಷ್ಟಾಚಾರ, ಕೋಮು ಗಲಭೆಗಳು ಸಮಾಜದ ಶಾಂತಿಯುತ ಬದುಕಿಗೆ ಮಾರಕವಾಗಿದೆ . ಈ ನಿಟ್ಟಿನಲ್ಲಿ ಯುವ ಸಮೂಹ ಜಾಗೃತರಾಗ ಬೇಕು. ವಿಶ್ವ ಗುರು ಭಾರತ ದ ನಮ್ಮ ನೆಚ್ಚಿನ ಪ್ರಧಾನಿ ಶ್ರೀಯುತ ನರೇಂದ್ರ ಮೋದಿ ಜಿ ಯವರ ನೇತೃತ್ವದ ಸರಕಾರ ಜಗತ್ತಿನ ಎಲ್ಲಾ ರಾಷ್ಟ್ರಗಳ ವಿಶ್ವಾಸವನ್ನು ಗಳಿಸುತ್ತಾ ಜಗತ್ತಿನ ಅತ್ಯಂತ ಶ್ರೇಷ್ಠ ನಾಯಕ ಎಂಬುವುದು ನಮ್ಮೆಲ್ಲರ ಹೆಗ್ಗಳಿಕೆ. ಆಪರೇಷನ್ ಸಿಂಧೂರ್ನ ಲ್ಲಿ ಭಾರತದ ಮಿಲಿಟರಿ ಶಕ್ತಿ, ನಮ್ಮ ಯೋಧರ ತಾಕತ್ತು, ಭಾರತದ ಪ್ರತಿಕ್ರಿಯೆ ಜಗತ್ತಿಗೆ ಅರಿವಾಗಿದೆ. ನಾವೆಲ್ಲರೂ ಪಣ ತೊಟ್ಟು ದುಡಿಯ ಬೇಕಾಗಿದೆ ಎಂದು ಕರೆ ನೀಡಿದರು.
ಅಕ್ಷಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ ತಮ್ಮ ಸ್ವಾತಂತ್ರ್ಯ ಶುಭಾಶಯ ನುಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುತ್ತಾ, ನಮ್ಮ ಯೋಧರ ತಮ್ಮ ಜೀವವನ್ನು ಪಣಕ್ಕಿಟ್ಟು ನಮಗೆ ಸುರಕ್ಷತೆ ನೀಡುತ್ತಿರುವಾಗ ,ದೇಶದ ಒಳಗೆ ಭಯೋತ್ಪಾದನೆ ಮತ್ತು ಸಾಮಾಜಿಕ ಅಶಾಂತಿಯ ಸೃಷ್ಟಿಸುವುದು ವಿಪರ್ಯಾಸ. ಈ ಹಿನ್ನೆಲೆಯಲ್ಲಿ ಯುವ ಸಮೂಹ ಎಚ್ಚೆತ್ತು ದೇಶ ರಕ್ಷಣೆ ಮತ್ತು ಭಾರತದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ನಾವು ನಮ್ಮ ಕರ್ತವ್ಯವನ್ನು ಯಥಾವತ್ತಾಗಿ ಮಾಡಿದರೆ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಹಿರಿಯರನ್ನು ಗೌರವಿಸಿ , ಅವರ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ , ಉತ್ತಮ ಕಲಿಕೆ ಮತ್ತು ಸುಸಂಸ್ಕೃತ ಜೀವನ ನಡೆಸಿದರೆ ನಮ್ಮ ಜೀವನ ಸಾರ್ಥಕ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ರಾದ ಶ್ರೀ ಸಂಪತ್ ಕೆ ಪಕ್ಕಳ , ಆಡಳಿತಾಧಿಕಾರಿ ಶ್ರೀ ಅರ್ಪಿತ್ ಟಿ. ಎ. ಉಪಸ್ಥಿತರಿದ್ದರು. ಫ್ಯಾಷನ್ ಡಿಸೈನ್ ವಿಭಾಗದ ವಿದ್ಯಾರ್ಥಿನಿಗಳಾದ ಕುಮಾರಿ ಪ್ರಕೃತಿ, ರಮ್ಯಾ , ಮೋಕ್ಷ ರಾಷ್ಟ್ರ ಗೀತೆ ಮತ್ತು ಧ್ವಜ ಗೀತೆ ಹಾಡಿದರು. ಕಾಲೇಜಿನ ವಿದ್ಯಾರ್ಥಿ ಒಕ್ಕೂಟದ ನಾಯಕ ರಾಕೇಶ್ ಸ್ವಾಗತಿಸಿ, ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿ ಕುಮಾರಿ ವರ್ಷಿಣಿ ವಂದಿಸಿದರು. ಆಂತರಿಕ ವಿನ್ಯಾಸ ವಿಭಾಗದ ವಿದ್ಯಾರ್ಥಿನಿ ದೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು.
ನ್ಯೂಸ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ :
ಶಕ್ತಿ ನ್ಯೂಸ್ ಪುತ್ತೂರು : https://shakthinewz.com/suddi/14826/akshya/
ನ್ಯೂಸ್ ಪುತ್ತೂರು : https://newsputtur.com/2025/08/15/79th-independence-day-under-the-auspices-of-akshaya-group-educational-institutions/