ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಾಣಿಜ್ಯ ವಿಭಾಗದ ಉಪನ್ಯಾಸಕ ಶ್ರೀ ಕಿಶನ್ ಎನ್ ರಾವ್ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.
21ನೇಶತಮಾನದಲ್ಲಿ ಸ್ಪರ್ಧಾತ್ಮಕವಾಗಿ ಸವಾಲು ಗಳನ್ನು ಎದುರಿಸಬೇಕಾಗುತ್ತದೆ. ಹಲವು ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಉಪಯೋಗಿಸಿ ತಂತ್ರಜ್ಞಾನದಲ್ಲಿ ಕ್ರಾಂತಿ ಯನ್ನು ಸೃಷ್ಟಿಸುತ್ತಿರುವ ಮನುಷ್ಯ ನಿಗೆ ಅಷ್ಟೇ ಸವಾಲುಗಳನ್ನು ಎದುರಿಸುವ ಅನಿವಾರ್ಯತೆ ಇದೆ. ಸವಾಲುಗಳನ್ನು ತಂತ್ರಗಾರಿಕೆಯಿಂದ ಎದುರಿಸ ಬೇಕಾದರೆ ಕೌಶಲ್ಯ ಗಳನ್ನು ಮೈಗೂಡಿಸಿಕೊಳ್ಳ ಬೇಕು.
21ನೇ ಶತಮಾನದ ಕೌಶಲ್ಯಗಳು ಎಂದರೆ ಆಧುನಿಕ ಜಗತ್ತಿನಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಸಾಮರ್ಥ್ಯಗಳು ಮತ್ತು ಜ್ಞಾನ. ಇವುಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಸಂವಹನ, ಸಹಯೋಗ, ಸೃಜನಶೀಲತೆ, ತಂತ್ರಜ್ಞಾನ ಸಾಕ್ಷರತೆ ಮತ್ತು ಸಮಸ್ಯೆ ಪರಿಹಾರದ ಕೌಶಲ್ಯಗಳು,ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂವಹನ ,ಉತ್ಪಾದಕತೆ ಮತ್ತು ಹೊಣೆಗಾರಿಕೆಗಳಂತಹ ಕೌಶಲ್ಯದ ಪ್ರಾವೀಣ್ಯತೆಯ ಅಗತ್ಯದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ನೀಡಿದರು.
ಬಿ ಸಿ ಎ ವಿಭಾಗದ ಮುಖ್ಯಸ್ಥೆ ಶ್ರೀಮತಿ ದೀಕ್ಷಾ ರೈ ಪ್ರಾಸ್ತಾವಿಕವಾಗಿ ಮಾತನಾಡಿ ವೇಗವಾಗಿ ಮುನ್ನೆಡೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಗಳನ್ನು ಯಥಾವತ್ತಾಗಿ ಅಭಿವೃದ್ಧಿ ಪಡಿಸಿ ಕೊಳ್ಳುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಆವಿಷ್ಕಾರ ವಾಗುವಂತೆ ಹೊಸ ಕೌಶಲ್ಯ ಗಳನ್ನು ಅಳವಡಿಸಿ ಕೊಳ್ಳುವುದರ ಅಗತ್ಯದ ಬಗ್ಗೆ ತಿಳಿಸಿದರು.
ಪ್ರಥಮ ಬಿ.ಸಿ. ಎ ವಿಭಾಗದ ವಿದ್ಯಾರ್ಥಿ ಗಳಾದ ಚ0ಪ್ರೀತ ವಂದಿಸಿ,ವೀಕ್ಷ ಕಾರ್ಯಕ್ರಮದ ನಿರೂಪಿಸಿದರು.
ನ್ಯೂಸ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ :
ಸುದ್ದಿ ನ್ಯೂಸ್ ಪುತ್ತೂರು : https://puttur.suddinews.com/archives/90835
ನ್ಯೂಸ್ ಪುತ್ತೂರು :
https://newsputtur.com/2025/08/03/21st-century-skills-proficiency-workshop-at-akshaya-college/
ಜೂಮ್ ನ್ಯೂಸ್ : https://zoomintv.online/post-102795/