ದಿನಾಂಕ 26.07.2025 ರಂದು ಅಕ್ಷಯ ಕಾಲೇಜು ಪುತ್ತೂರಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಎಲ್ಲಾ ಅತಿಥಿಗಳು ಭಾರತ ಮಾತೆಯ ಭಾವಚಿತ್ರಕ್ಕೆ ಗೌರವ ಪುಷ್ಪಾರ್ಚನೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಂಪತ್ ಪಕ್ಕಳ ಪ್ರಾಂಶುಪಾಲರು, ಅಕ್ಷಯ ಕಾಲೇಜು ಪುತ್ತೂರು ಇವರು ವಹಿಸಿ ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ ದೇಶ ಸೇವೆ ಹಾಗೂ ಯೋಧರ ಬಲಿದಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಮತಿ ಕಲಾವತಿ ಜಯಂತ್ ಆಡಳಿತ ವ್ಯವಸ್ಥಾಪಕಿ ಅಕ್ಷಯ ಕಾಲೇಜು ಪುತ್ತೂರು ಇವರು ಯೋಧರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದು ದೇಶದ ಭದ್ರತೆಗಾಗಿ ನಾವು ಅವರ ಬಲಿದಾನವನ್ನು ಎಂದೆಂದಿಗೂ ಸ್ಮರಿಸಬೇಕು ಎಂದು ಶುಭ ನುಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ಗಂಗರತ್ನ ಪ್ರಾಂಶುಪಾಲರು ಅಕ್ಷಯ ಪಿಯು ಕಾಲೇಜು ಪುತ್ತೂರು ಹಾಗೆಯೇ ಈ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಶ್ರೀ ರಕ್ಷಣಾ ಟಿ ಆರ್, ಆಂತರಿಕ ಗುಣಮಟ್ಟದ ಸಂಯೋಜಕಿ ಶ್ರೀಮತಿ ರಶ್ಮಿ, ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಯಾದ ಕುಮಾರಿ ಮೇಘಶ್ರೀ ಉಪಸ್ಥಿತರಿದ್ದರು. ಅಕ್ಷಯ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿ. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಹರಿಶ್ಚಂದ್ರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ನ್ಯೂಸ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ :
ಶಕ್ತಿ ನ್ಯೂಸ್ ಪುತ್ತೂರು : https://shakthinewz.com/education/14316/akshay-kargil/