ಪುತ್ತೂರಿನ ಸಂಪ್ಯದ ಅಕ್ಷಯ ಕಾಲೇಜು ಜೂನ್-ಜುಲೈ 2025ರಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತಿಮ ಪದವಿ ಪರೀಕ್ಷೆಯಲ್ಲಿ ಬಿ.ಎಸ್ಸಿ. ಫ್ಯಾಶನ್ ಡಿಸೈನ್ ವಿಭಾಗವು ಶೇ.100% ಫಲಿತಾಂಶ ದಾಖಲಾಗಿದೆ. 22 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ 10 ವಿದ್ಯಾರ್ಥಿಗಳು ಶೇ.80ಕ್ಕಿಂತ ಅಂಕಗಳನ್ನು ಗಳಿಸಿದ್ದು, ಮಧುರ (92%) ಪ್ರಥಮ, ಭಾರ್ಗವಿ (91%) ದ್ವಿತೀಯ ಸ್ಥಾನ ಪಡೆದಿದ್ದಾರೆ.
ಹಾಗೆಯೇ ಬಿ.ಎಸ್ಸಿ. ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳು ಕೂಡಾ ಶೇ.100 ಫಲಿತಾಂಶ ಗಳಿಸಿದ್ದು, 10 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಪಡೆದಿದ್ದಾರೆ. ಕು.ಯಜ್ಞಾ (90%) ಪ್ರಥಮ, ಕು. ಪೂಜಿತಾ (85%) ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 92% ಫಲಿತಾಂಶ ದಾಖಲಾಗಿದೆ. ಕ್ಷೇಮ ಎಂ. (95.38%) ಮತ್ತು ಅಂಜಲಿ (94.46%) ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿಭಾಗದ 25 ವಿದ್ಯಾರ್ಥಿಗಳಲ್ಲಿ 22 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಗಳಿಸಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಅಭಿನಂದಿಸಿದೆ.
ನ್ಯೂಸ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ :
ಸುದ್ದಿ ನ್ಯೂಸ್ ಪುತ್ತೂರು : https://puttur.suddinews.com/archives/908355