ಪುತ್ತೂರು: ಅಕ್ಷಯ ಕಾಲೇಜು, ಪುತ್ತೂರಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ‘ನಶಾ ಮುಕ್ತ ಭಾರತ ಅಭಿಯಾನ’ ಜಾಗೃತಿ ಕಾರ್ಯಕ್ರಮವನ್ನು ಆಗಸ್ಟ್ 13, 2025 ರಂದು ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಗ್ರಾಮಾಂತರ ಪೊಲೀಸ್ ಠಾಣೆ, ಪುತ್ತೂರಿನ ಉಪನಿರೀಕ್ಷಕರಾದ ಜಂಬುರಾಜ್ ಬಿ. ಮಹಾಜನ್ ಉದ್ಘಾಟಿಸಿದರು. ಅವರು ಮಾತನಾಡಿ, “ಮಾದಕ ವ್ಯಸನವು ವ್ಯಕ್ತಿಯ ಜೀವನವನ್ನಷ್ಟೇ ಅಲ್ಲ, ಕುಟುಂಬ ಮತ್ತು ಸಮಾಜದ ಶಾಂತಿಯನ್ನೂ ಹಾಳುಮಾಡುತ್ತದೆ. ವಿದ್ಯಾರ್ಥಿಗಳು ಇಂತಹ ವ್ಯಸನದ ಬಲೆಗೆ ಬೀಳದೆ, ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರಬೇಕು” ಎಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಉಪಪ್ರಾಂಶುಪಾಲರಾದ ರಕ್ಷಣಾ ಟಿ. ಆರ್. ವಹಿಸಿ, ವಿಧ್ಯಾರ್ಥಿಗಳು ದೇಶದ ಭವಿಷ್ಯ, ವ್ಯಸನಮುಕ್ತ ಜೀವನವು ಯಶಸ್ಸಿನ ಮೂಲ. ಇಂತಹ ಜಾಗೃತಿ ಕಾರ್ಯಕ್ರಮಗಳು ಉತ್ತಮ ಜೀವನಶೈಲಿಯತ್ತ ಪ್ರೇರಣೆ
ನೀಡುತ್ತವೆ” ಎಂದು ಅಭಿಪ್ರಾಯಪಟ್ಟರು.
ಹಾಗೆಯೇ ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕಿ ಶ್ರೀಮತಿ ರಶ್ಮಿ ಕೆ., ಉಪಸ್ಥಿತರಿದ್ದರು. ಏನ್ಎಸ್ಎಸ್ ಘಟಕ – 2 ರ ಯೋಜನಾಧಿಕರಿ ಕು. ಮೇಘ ಶ್ರೀ ಸ್ವಾಗತಿಸಿ, ಘಟಕ – 1 ರ ಯೋಜನಾಧಿಕರಿ ಶ್ರೀ. ರಾಕೇಶ್ ಕೆ. ವಂದಿಸಿದರು. ಏನ್ಎಸ್ಎಸ್ ಸ್ವಯಂ ಸೇವಕಿ ಕು. ಅಪೇಕ್ಷಾ ಜೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕಾಲೇಜಿನ ಉಪನ್ಯಾಸಕರು ಹಾಗೆಯೇ ಏನ್ಎಸ್ಎಸ್ ಸ್ವಯಂ ಸೇವಕ ಸೇವಾಕಿಯರು, ವಿಧ್ಯಾರ್ಥಿಗಳುಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನ್ಯೂಸ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ :
ಸುದ್ದಿ ನ್ಯೂಸ್ ಪುತ್ತೂರು :
https://puttur.suddinews.com/archives/910076