ಅಕ್ಷಯ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಾಗಾರ
ಅಕ್ಷಯ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಾಗಾರ ಕಾನೂನನ್ನು ಯಾವ ಸಂದರ್ಭದಲ್ಲಿ ಎಲ್ಲಿ ಹೇಗೆ ಪಾಲಿಸಬೇಕು ಎಂಬ ಅರಿವು ಹಾಗೂ ಜವಾಬ್ದಾರಿ ಪ್ರಜ್ಞಾವಂತ ನಾಗರಿಕರಿಗೆ ಇರಬೇಕಾಗುತ್ತದೆ. ನಾವು ಕಾನೂನಿನ ಹೊರತಾಗಿ ಜೀವಿಸುವುದು ಕಷ್ಟ. ಹೆಣ್ಣುಮಕ್ಕಳ ಜವಾಬ್ದಾರಿ ಕಾನೂನು ಪಾಲನೆಯಲ್ಲಿ ಬಹುಮುಖ್ಯವಾಗಿದೆ. ಸ್ವರಕ್ಷಣೆ ಮತ್ತು ಸಾಮಾಜಿಕ ವರ್ತನೆಯ ಬಗ್ಗೆ ನಮಗೆ ಇರಬೇಕಾಗುತ್ತದೆ. ಹೆಣ್ಣಿಗೆ ಕಿರುಕುಳ, ದೌರ್ಜನ್ಯ ಹೆಚ್ಚಾಗಿ ತಮ್ಮ ಪರಿಚಿತರಿಂದಲೇ ಆಗುತ್ತದೆ. ದೇಶದ ಭವಿಷ್ಯವಾದ ಯುವ ಸಮುದಾಯ ದುಶ್ಚಟಗಳಿಗೆ ಮಾರುಹೋಗಬಾರದು ಎಂದು ಗ್ರಾಮಾಂತರ ಠಾಣೆ, ಸಂಪ್ಯ ಪುತ್ತೂರಿನ ಪ್ರೊಬಷನರಿ ಉಪನರೀಕ್ಷಕರಾದ …