- Admission
- Eligibilty
- Sports/NSS Facilities
- Alumni
- Faculty
ಅಕ್ಷಯ ಕಾಲೇಜಿನಲ್ಲಿ ರಾಷ್ಟೀಯ ಯುವದಿನಾಚರಣೆ
ಪುತ್ತೂರು ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತಿರುವ ಸಂಪ್ಯ ಕಾಲೇಜಿನಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಪುತ್ತೂರು ಹಾಗೂ ಅಕ್ಷಯ ಕಾಲೇಜಿನ ರೆಡ್ ಕ್ರಾಸ್ ಘಟಕ ಹಾಗೂ ರಾಷ್ಟೀಯ ಸೇವಾ ಯೋಜನಾ ಕಾರ್ಯಕ್ರಮದಡಿಯಲ್ಲಿ ರಾಷ್ಟೀಯ ಯುವದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜೆಸಿಐ ಇಂಡಿಯಾದ ವಲಯ ಮಟ್ಟದ ತರಬೇತುದಾರರಾದ ದಾಮೋದರ ಪಾಟಾಳಿಯವರು ವಿದ್ಯಾರ್ಥಿಗಳಿಗೆ ಭಾರತ ದೇಶದ ಬೆನ್ನೆಲು ಯುವಜನತೆಯಾಗಿದ್ದು, ತಮ್ಮ ಗುರಿಯನ್ನು ಸಾಧಿಸಲು ಪಡೆಯಬೇಕಾದ ಶ್ರಮ, ಜೇವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅಕ್ಷಯ ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಪಕ್ಕಳ ರವರು ರಾಷ್ಟೀಯ ಯುವದಿನಾಚರಣೆಯ ಮಹತ್ವವನ್ನು ತಿಳಿಸಿದರು.ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕದ ನೋಡಲ್ ಅಧಿಕಾರಿ ರಕ್ಷಣಾ ಟಿ. ಆರ್ ಸ್ವಾಗತಿಸಿ, ಪುತ್ತೂರು ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಕ್ರಮ ಸಂಯೋಜನ ಉಪಸಮಿತಿಯ ಮುಖ್ಯಸ್ಥರಾದ ಮಸ್ಕರೇನಸ್ ಪ್ಯಾಟ್ರಿಕ್ ಸಿಪ್ರಿಯನ್ ಪ್ರಾಸ್ತಾವಿಕ ಮಾತನಾಡಿದರು.ವಿದ್ಯಾರ್ಥಿ ಹಸ್ತಿಕ್ ವಂದಿಸಿದರು.ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್ ಟಿ. ಎ ಇಂಡಿಯನ್ ರೆಡ್ ಕ್ರಾಸ್ ಪುತ್ತೂರು ಘಟಕದ ಸೆಕ್ರೆಟರಿ ಆಸ್ಕರ್ ಆನಂದ್, ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಯುನಿಕ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವಿದ್ಯಾಶ್ರೀ ಕಾರ್ಯಕ್ರಮ ನಿರೂಪಿಸಿದರು.