- Admission
- Eligibilty
- Sports/NSS Facilities
- Alumni
- Faculty
ಅಕ್ಷಯ ಕಾಲೇಜ್ ನಲ್ಲಿ 'ಕೃತ್ವ 2023' : ಸಮಾರೋಪ ಕಾರ್ಯಕ್ರಮ
ಪುತ್ತೂರು : ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ (ರಿ) ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಪದವಿ ಮಟ್ಟದ ಅಂತರ್ ಕಾಲೇಜು ಸ್ಪರ್ಧೆ “ಕೃತ್ಯ” ಇದರ ಸಮಾರೋಪ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರು ವಿಸ್ಲಂ ಎಜುಕೇಶನ್ ತರಬೇತುದಾರರಾದ ಗುರು ತೇಜ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪಠ್ಯಚಟುವಟಿಕೆಗಳೊಂದಿಗೆ ಪತ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಹಾಗೆಯೇ ಮತ್ತೋರ್ವ ಅತಿಥಿಯಾಗಿದ್ದ ಸ್ನೇಹಸಿಲ್ ನ ಮಾಲಕರಾದ ಸತೀಶ್ ಎಸ್ “ಭವಿಷ್ಯವನ್ನು ಶಿಕ್ಷಣ ರೂಪಿಸುವ ಹಾಗೆಯೇ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗವಹಿಸುದರಿಂದ ನಮ್ಮಲ್ಲಿ ಮನೋಸೈರ್ಯ ವೃದ್ಧಿಯಾಗುತ್ತದೆ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಯಂತ್ ನುಡುಬೈಲು ಮಾತನಾಡಿ, ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ‘ಕೃತ್ಯ 2023 ರಲ್ಲಿ ಸುಮಾರು 36 ಕಾಲೇಜುಗಳು ಭಾಗವಹಿಸುವಂತೆ ಮಾಡಿದ ‘ಕೃತ್ಯ’ 2023 ಆಯೋಜನಾ ತಂಡದ ಕಾರ್ಯವೈಖರಿಯನ್ನು ಶ್ಲಾಘಿಸಿದರು ಹಾಗೂ ಸ್ಪಧಾರ್ಥಿಗಳಿಗೆ ಶುಭಹಾರೈಸಿದರು.

ಪ್ರಾಂಶುಪಾಲರಾದ ಸಂಪತ್ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಕೃತ್ಯ ಫಸ್ಟ್ ಸಂಯೋಜಕರಾದ ರಕ್ಷಣ್ ಟಿ.ಆರ್, ವಿದ್ಯಾರ್ಥಿ ನಾಯಕ ಗಗನ್ ದೀಪ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸವಿದೇಚಮ್ಮ ಸ್ವಾಗತಿಸಿ, ಟೀನಾ ವಂದಿಸಿದರು. ವಿದ್ಯಾರ್ಥಿ ಬಳಗ ಪ್ರಾರ್ಥಿಸಿ, ರಿಯಾ ಪೊನ್ನಮ್ಮ ನಿರೂಪಿಸಿದರು
ಸವಿದೇಚಮ್ಮ ಸ್ವಾಗತಿಸಿ, ಟೀನಾ ವಂದಿಸಿದರು. ವಿದ್ಯಾರ್ಥಿ ಬಳಗ ಪ್ರಾರ್ಥಿಸಿ, ರಿಯಾ ಪೊನ್ನಮ್ಮ ನಿರೂಪಿಸಿದರು