- Admission
- Eligibilty
- Sports/NSS Facilities
- Alumni
- Faculty
ಅಕ್ಷಯ ಕಾಲೇಜಿನಲ್ಲಿ ಎಲೈಟ್ - ಇಂಟೀರಿಯರ್ ಡಿಸೈನ್ ಸಂಘ ಉದ್ಘಾಟನೆ
ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು ಇದರ ಆಶ್ರಯದಲ್ಲಿ ಇಂಟೀರಿಯರ್ ಡಿಸೈನ್ ಸಂಘವನ್ನು ಮೇ.31ರಂದು ಉದ್ಘಾಟಿಸಲಾಯಿತು .ಪಿ ಜಿ ಜಗನ್ನಿವಾಸ ರಾವ್ ಸಿವಿಲ್ ಎಂಜಿನಿಯರ್ ಇವರು ದೀಪ ಪುಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ ವಿದ್ಯಾರ್ಥಿಗಳಿಗೆ ಇಂಟೀರಿಯರ್ ನಲ್ಲಿ ವಾಸ್ತುವಿನ ಬಗ್ಗೆ, ಮನೆಯ ಸುತ್ತಳತೆ ಹೇಗೆ ಮಾಡಬೇಕು ಹಾಗೂ ಮನೆಯ ಆಯಗಳನ್ನು ಹೇಗೆ ಉಪಯೋಗಿಸಬೇಕು ಮತ್ತು ಮನೆಯ ಕೊಠಡಿಗಳು ಯಾವ ವಾಸ್ತುವಿನಲ್ಲಿ ಇರಬೇಕು ಮನೆಯ ವಾಸ್ತುವನ್ನು ಹೇಗೆ ನಾವು ನಿರ್ಧರಿಸಬೇಕು ಮತ್ತು ಮನೆಯ ಇಂಟೀರಿಯರ್ ಹೇಗೆ ನಾವು ರಚಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್ ಟಿ ಎ ವಹಿಸಿದರು . ವೇದಿಕೆಯಲ್ಲಿ ಇಂಟೀರಿಯರ್ ವಿಭಾಗದ ಮುಖ್ಯಸ್ಥ ರಕ್ಷಣ ಟಿ ಆರ್ ಹಾಗೂ ಇಂಟೀರಿಯರ್ ವಿಭಾಗದ ಉಪನ್ಯಾಸಕಿ ಶ್ರದ್ಧಾ, ವಿದ್ಯಾರ್ಥಿ ಕಾರ್ಯದರ್ಶಿ ಅನ್ನಪೂರ್ಣ ಹಾಗೂ ಜೊತೆ ಕಾರ್ಯದರ್ಶಿ ರಿಯಾ ಪೊನ್ನಮ್ಮ ಉಪಸ್ಥಿತರಿದ್ದರು.
ವಿಧ್ಯಾರ್ಥಿನಿ ಫಾತಿಮತ್ ನೌಸೀನ ಸ್ವಾಗತಿಸಿ, ರಿಯಾ ಪೊನ್ನಮ್ಮ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿ ವಿನೋದ್ ಕೆ ಸಿ ಕಾರ್ಯಕ್ರಮವನ್ನು ನಿರೂಪಿಸಿದರು.
ವಿಧ್ಯಾರ್ಥಿನಿ ಫಾತಿಮತ್ ನೌಸೀನ ಸ್ವಾಗತಿಸಿ, ರಿಯಾ ಪೊನ್ನಮ್ಮ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿ ವಿನೋದ್ ಕೆ ಸಿ ಕಾರ್ಯಕ್ರಮವನ್ನು ನಿರೂಪಿಸಿದರು.