- Admission
- Eligibilty
- Sports/NSS Facilities
- Alumni
- Faculty
ಸಂವಿಧಾನ ಜಾಗೃತಿ ಜಾಥಾ 2024
ಪುತ್ತೂರಿನ ಆರ್ಯಾಪು ಗ್ರಾಮ ಪಂಚಾಯತ್ ನಲ್ಲಿ ಸಂವಿಧಾನ ಜಾಗೃತಿ ಜಾಥಾ 2024 ರಲ್ಲಿ
ಅಕ್ಷಯ ಕಾಲೇಜಿನ ಸುಮಾರು 50ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿರುತ್ತಾರೆ. ಜಾಥವನ್ನು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಪ್ರಾರಂಭಿಸಿ ನಂತರ ಸಂವಿಧಾನದ ಕುರಿತು ಮಾಹಿತಿ ನೀಡಲಾಯಿತು. ಸಂವಿಧಾನ ಮಾಹಿತಿ ಜಾಥವು ಗ್ರಾಮ ಪಂಚಾಯಿತಿಯಿಂದ ಹೊರಟು ಸಂಪ್ಯದ ಆರಕ್ಷಕ ಠಾಣೆವರೆಗೆ ನಡೆಸಲಾಯಿತು. ಕಾಲೇಜಿನ ಅಧ್ಯಕ್ಷರಾದ ಶ್ರೀ ಜಯಂತ್ ನಡುಬೈಲು, ಆಡಳಿತಾಧಿಕಾರಿಯಾದ ಶ್ರೀ ಅರ್ಪಿತ್ ಟಿ.ಎ, ರಾಷ್ಟ್ರೀಯ ಸೇವಾ ಯೋಜನೆ ಸಹಕಾರ್ಯಕ್ರಮಾಧಿಕಾರಿ ಕುಮಾರಿ ಮೇಘಶ್ರೀ ಹಾಗೂ ಕಾಲೇಜಿನ
ಶಿಕ್ಷಕ ವೃಂದ ಉಪಸ್ಥಿತರಿದ್ದರು.