ಅಕ್ಷಯ ಪದವಿ ಕಾಲೇಜಿನ ಆಂಗ್ಲ ಭಾಷಾ ವಿಭಾಗದ ವಾಲ್ ಬೋರ್ಡ್ ಮ್ಯಾಗಜಿನ್ ಉದ್ಘಾಟನೆ ಮತ್ತು ಪ್ರೊಫೆಷನಲ್ ಕಮ್ಯುನಿಕೇಷನ್ ಕಾರ್ಯಾಗಾರ
ಅಕ್ಷಯ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ (ರಿ.) ಅಧೀನದಲ್ಲಿ ಕಾರ್ಯಾಚಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಆಂಗ್ಲ ಭಾಷಾ
ವಿಭಾಗ ಮತ್ತು ಐಕ್ಯೂ ಎಸಿ ಸಹಭಾಗಿತ್ವದಲ್ಲಿ ” ಪ್ರೋಫೆಷನಲ್ ಕಮ್ಯುನಿಕೇಷನ್ ಎಂಬ ವಿಷಯದ ಕಾರ್ಯಗಾರ ಮತ್ತು ವಾಲ್ ಬೋಡ್
ಮ್ಯಾಗಜಿನ್ ಉದ್ಘಾಟನಾ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ
ಕಾರ್ಯದರ್ಶಿಯಾಗಿರುವ ಡಾ. ಅಕ್ಷಯ್, ವಿದ್ಯಾರ್ಥಿಗಳ ಮೊದಲ ಪ್ರಯತ್ನ ಯಶಸ್ಸು ಕಂಡಿದೆ. ಇದು ನಿರಂತರವಾಗಿ ಹರಿವ ನೀರಂತೆ
ಎಲ್ಲಾ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮುನ್ನುಡಿಯಾಗಲಿ ಎಂದು ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅಸಿಸ್ಟೆಂಟ್ ಪ್ರೊಫೆಸರ್ ಬಾಲಕೃಷ್ಣ ಹೆಚ್ ಆಂಗ್ಲ ಭಾಷಾ ವಿಭಾಗ
ಮುಖ್ಯಸ್ಥರು, ವಿವೇಕಾನಂದ ಕಾಲೇಜು ಕಲಾ ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ)
ಇವರು ವಾಲ್ ಬೋರ್ಡ್ ಮ್ಯಾಗಜಿನ್ ಉದ್ಘಾಟನೆ ಮಾಡಿ ವಿದ್ಯಾರ್ಥಿಗಳು ಈ ವೇದಿಕೆಯನ್ನು ಹೇಗೆ ಬಳಕೆ ಮಾಡಬೇಕು ಮತ್ತು
ಅದರಿಂದ ವಿದ್ಯಾರ್ಥಿಗಳಿಗೆ ಆಗುವ ಉಪಯೋಗಳನ್ನು ತಿಳಿಸಿ ಸದಾ ಕಲಿಕೆಯ ತುಡಿತ ನಿಮ್ಮದಾಗಲಿ ಎಂದು ಶುಭಹಾರೈಸಿ ನಂತರ
ಪ್ರೊಫೆಷನಲ್ ಕಮ್ಯುನಿಕೇಷನ್ ವಿಷಯದ ಕುರಿತು ಕಾರ್ಯಾಗಾರ ನಡೆಸಿ ವಿದ್ಯಾರ್ಥಿಗಳಿಗೆ ಸಂವಹನದ ಮೂಲಕ ವೃತ್ತಿಪರ ಉದ್ಯೋಗಕ್ಕೆ
ತಮ್ಮನ್ನು ಹೇಗೆ ತೊಡಗಿಸಿಕೊಳ್ಳಬೇಕು ಎಂಬ ವಿಚಾರವನ್ನು ಚಟುವಟಿಕೆಗಳನ್ನು ಮಾಡುವ ಮೂಲಕ ವಿವರಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಗಳಾದ ಡಾ. ಅರ್ಪಿತ್ ಟಿ.ಎ ಇವರು
ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಸಂವಹನ ಕ್ರಿಯೆ ಹೇಗೆ ಪ್ರಭಾವ ಬೀರುತ್ತದೆ ಹಾಗೂ ವಿದ್ಯಾರ್ಥಿಗಳು ಇಂತಹ ಕಾರ್ಯಗಾರವನ್ನು
ಸತುಪಯೋಗಪಡಿಸಿಕೊಳ್ಳಬೇಕು ಹಾಗೂ ಇದಕ್ಕೆ ಬೇಕಾದಂತಹ ಎಲ್ಲಾ ಸಹಕಾರವನ್ನು ಕಾಲೇಜು ನೀಡಲು ಸದಾ ಸಿದ್ಧವಾಗಿದೆ ಎಂದು
ಭರವಸೆ ನೀಡಿದರು.
ಇದೇ ವೇಳೆ ಆಂಗ್ಲ ಭಾಷೆ ವಿಭಾಗದಿಂದ ನಡೆಸಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಸಲಾಯಿತು.
Advertisement competition:
Winners : ಪ್ಯಾಷನ್ ಡಿಸೈನ್ ವಿಭಾಗ
Runners : ಬಿಕಾಂ ವಿಭಾಗ :
Reels making competition:
ಪ್ರಥಮ : ಅಫೀಝ ಮತ್ತು ಪಾವನ ತೃತೀಯ ಬಿ. ಸಿ. ಎ
ದ್ವಿತೀಯ : ಶ್ರೇಯ ಮತ್ತು ವೀಕ್ಷಾ ದ್ವಿತೀಯ ಬಿ. ಎ
ತೃತೀಯ : ಪುಣ್ಯ ಮತ್ತು ಶಹನಾ ದ್ವಿತೀಯ ಬಿ. ಕಾಂ
IQAC ಸಂಯೋಜಕಿ ಹಾಗೂ ಆಂಗ್ಲ ಭಾಷಾ ವಿಭಾಗ ಮುಖ್ಯಸ್ಥೆಯಾಗಿರುವ ಶ್ರೀಮತಿ ರಶ್ಮಿ.ಕೆ ಪ್ರಸ್ತಾವನೆಗೈದು, ಆಂಗ್ಲ ಭಾಷಾ
ಉಪನ್ಯಾಸಕಿ ಕು.ಪ್ರತಿಕ್ಷ ಪೂಜಾರಿ ಅತಿಥಿಗಳ ಪರಿಚಯ ವಾಚಿಸಿ,
ದ್ವಿತೀಯ ಬಿಕಾಂ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿ, ಕು. ಶ್ರೇಯ ದ್ವಿತೀಯ ಬಿ.ಎ ಸ್ವಾಗತಿಸಿ, ಕು ಆಯುಷ್ಯತುಲ್ ವಫಾ ತೃತೀಯ ಬಿ.
ಕಾಂ ವಂದಿಸಿ, ರಜೀನ ಬಾನು ತೃತೀಯ ಎಫ್. ಡಿ ಕಾರ್ಯಕ್ರಮ ನಿರೂಪಿಸಿದರು.



