ಅಕ್ಷಯ ಕಾಲೇಜಿನಲ್ಲಿ ಚಾರ್ಟೆಡ್ ಅಕೌಂಟೆಂಟ್ ಕುರಿತು ಕಾರ್ಯಾಗಾರ
ಪುತ್ತೂರು: ಅಕ್ಷಯ ಕಾಲೇಜು ಪುತ್ತೂರಿನ ಇನ್ವಿಕ್ತಾ ಕಾಮರ್ಸ್ ಅಸೋಸಿಯೇಷನ್ ಹಾಗೂ IQAC ವತಿಯಿಂದ ವಿದ್ಯಾರ್ಥಿಗಳಿಗಾಗಿ
“CA Journey – From Aspirants to Achievers” ಎಂಬ ವಿಷಯದ ಕುರಿತು ವಿಶೇಷ ಕಾರ್ಯಾಗಾರವನ್ನು ಸೆಪ್ಟೆಂಬರ್ 5ರಂದು
ಸಮಯ 01:15ಕ್ಕೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ರಾಹುಲ್, ವಾಣಿಜ್ಯ ಉಪನ್ಯಾಸಕರು, ಸಂತ ಫಿಲೋಮಿನಾ ಪಿಯು ಕಾಲೇಜು,
ಪುತ್ತೂರು, ಭಾಗವಹಿಸಿದ್ದರು. ತಮ್ಮ ಉಪನ್ಯಾಸದಲ್ಲಿ ಅವರು CA ಕೋರ್ಸ್ಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. CA
ಕೋರ್ಸ್ಗಳ ಮಹತ್ವ, ಅವುಗಳ ಪ್ರಯೋಜನಗಳು, ಬಳಕೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ವೃತ್ತಿಜೀವನದಲ್ಲಿ ಅವು ನೀಡುವ
ಅವಕಾಶಗಳ ಕುರಿತು ವಿವರಿಸಿದರು.
ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಸಾಮರ್ಥ್ಯ ಮತ್ತು ಭವಿಷ್ಯದ ಗುರಿಗೆ ಅನುಗುಣವಾಗಿ ಸೂಕ್ತ ಕೋರ್ಸ್ಗಳನ್ನು ಆಯ್ಕೆ
ಮಾಡಿಕೊಳ್ಳುವ ಅಗತ್ಯವನ್ನು ಅವರು ತಿಳಿಸಿದರು. CA ಕೋರ್ಸ್ಗಳು ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯ ಹಾಗೂ ಸಾಮರ್ಥ್ಯವನ್ನು
ಹೆಚ್ಚಿಸುವುದರ ಜೊತೆಗೆ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಸಂಪತ್ ಕೆ. ಪಕ್ಕಳ, ಪ್ರಾಂಶುಪಾಲರು, ಅಕ್ಷಯ ಕಾಲೇಜು ಪುತ್ತೂರು, ಡಾ. ಅರ್ಪಿತ್ ಟಿ. ಎ., ಆಡಳಿತಾಧಿಕಾರಿ,
ಶ್ರೀಮತಿ ರಶ್ಮಿ ಕೆ., IQAC ಸಂಯೋಜಕರು ಹಾಗೂ ಶ್ರೀಮತಿ ಪಾವನಾ, ವಾಣಿಜ್ಯ ವಿಭಾಗದ ಮುಖ್ಯಸ್ಥರು,ಶ್ರೀಮತಿ ಯಕ್ಷಿತಾ
ಅಸೋಸಿಯೇಷನ್ ಸಂಯೋಜಕರು ಹಾಗೂ ಹವಿಷ್ ಶೆಟ್ಟಿ ಕಾರ್ಯದರ್ಶಿ ಇನ್ವಿಕ್ತಾ ಕಾಮರ್ಸ್ ಅಸೋಸಿಯೇಷನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಇನ್ವಿಕ್ತಾ ಕಾಮರ್ಸ್ ಅಸೋಸಿಯೇಷನ್ನ ಸಂಯೋಜಕರಾದ ಶ್ರೀಮತಿ ಯಕ್ಷಿತಾ ಅವರ ನೇತೃತ್ವದಲ್ಲಿ
ಆಯೋಜಿಸಲಾಯಿತು.
ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಕುಮಾರಿ ಶ್ರೇಯಶ್ರೀ ಅವರು ಸ್ವಾಗತ ಭಾಷಣ ಮಾಡಿದರು. ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಎಂ.ಎಸ್.
ಹರಿಪ್ರಿಯಾ ಅವರು ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ನಂತರ ಸಂಪನ್ಮೂಲ ವ್ಯಕ್ತಿಯನ್ನು ಶಾಲು ಹೊದಿಸಿ
ಗೌರವಿಸಲಾಯಿತು.ಕಾರ್ಯಕ್ರಮದ ನಿರೂಪಣೆಯನ್ನು ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಜಿನ್ಸಿ ಅವರು ನಿರ್ವಹಿಸಿದರು.ಕೊನೆಯಲ್ಲಿ
ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಸಹನಾ ಅವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಾಗಾರವು ವಿದ್ಯಾರ್ಥಿಗಳಿಗೆ CA ಕೋರ್ಸ್ ಕುರಿತು
ಅರಿವು ಮೂಡಿಸುವುದರ ಜೊತೆಗೆ, ತಮ್ಮ ಭವಿಷ್ಯದ ಶಿಕ್ಷಣ ಮತ್ತು ವೃತ್ತಿಜೀವನದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಮಾರ್ಗದರ್ಶನ
ನೀಡುವಲ್ಲಿ ಯಶಸ್ವಿಯಾಯಿತು.