- Admission
- Eligibilty
- Sports/NSS Facilities
- Alumni
- Faculty
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ದತ್ತಿ ನಿಧಿ- 2015
ಪುತ್ತೂರು: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು. ಪುತ್ತೂರು ತಾಲೂಕು, ಮತ್ತು ರೋಟರಿ ಕ್ಲಬ್ – ಪುತ್ತೂರು ಯುವ ನೇತೃತ್ವದಲ್ಲಿ, ಅಕ್ಷಯ ಕಾಲೇಜಿನ ಅಧ್ಯಯ ಸಾಹಿತ್ಯ ಸಂಘ ಮತ್ತು ರೊಟ್ಯಾಕ್ಟ್ ಕ್ಲಬ್ – ಅಕ್ಷಯ ಕಾಲೇಜು ಪುತ್ತೂರು ಸಹಾಭಾಗಿತ್ವದಲ್ಲಿ ” ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ದತ್ತಿ ನಿಧಿ- 2015″ ಉಪನ್ಯಾಸ ಕಾರ್ಯಕ್ರಮವು ಅಕ್ಷಯ ಕಾಲೇಜಿನಲ್ಲಿ ಸಂಪನ್ನಗೊಂಡಿತ್ತು. ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದ ಅಕ್ಷಯ ಕಾಲೇಜಿನ ಆಡಳಿತ ನಿರ್ದೇಶಕರಾಗಿರುವ ಜಯಂತ್ ನಸುಬೈಲ್ ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ವ್ಯಕ್ತಪಡಿಸಿದರು.
ಸಭಾಪತಿಯರಾದ ರೊಟಾಕ್ ಕ್ಲಬ್ ಅಕ್ಷಯ ಕಾಲೇಜು ಪುತ್ತೂರು, ರತ್ನಾಕರ ರೈ ಇವರು ಮಾತನಾಡಿ ಯಾವುದೇ ಭಾಷೆಯ ಬೆಳವಣಿಗೆಗೆ ಸಾಹಿತ್ಯವೇ ಕಾರಣ. ಅಧ್ಯಕ್ಷರ ನೆಲೆಯಲ್ಲಿ ಪುತ್ತೂರಿನ ಕ.ಸಾ.ಪ. ನ ಅಧ್ಯಕ್ಷರಾಗಿರುವ, ಪುತ್ತೂರು ಉಮೇಶ್ ನಾಯಕ್ರವರು ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಉಂಟಾಗಲು ಸಾಹಿತ್ಯ ಪ್ರಮುಖ ಘಟ್ಟಗಳು ಪಾತ್ರವಹಿಸುತ್ತವೆ ಹಾಗೂ ಅನುವಾದ ಸಾಹಿತ್ಯದಿಂದ ಕನ್ನಡ ಸಾಹಿತ್ಯದ ಕಾರ್ಯಾವು ಪ್ರಾರಂಭವಾಯಿತು ಈ ಮೂಲಕ ಸವಿ ನುಡಿದರು. ಸಂಪನ್ಮೂಲ ವ್ಯಕ್ತಿಗಳಾದ ಹಿರಿಯ ಲೇಖಕರು, ನಿವೃತ್ತ ಪ್ರಾದೇಶಿಕ ಸಾರ್ವಜನಿಕ ಸಮರ್ಖಾಧಿಕಾರಿ ಡಿ. ಆರ್.ಡಿ.ಓ ಕೇಂದ್ರ ರಕ್ಷಣಾ ಸಂಶೋಧನಾ ಇಲಾಖೆಯ ಅಧಿಕಾರಿಯಾಗಿರುವ ಜಯಪ್ರಕಾಶ್ ಇವರನ್ನು ಸನ್ಮಾನಿಸಲಾಯಿತು. ಹಾಗೂ ಇವರಿಂದ ಅನುವಾದ ಸಾಹಿತ್ಯ ಬಗ್ಗೆ ಉಪನ್ಯಾಸ ಕಾರ್ಯಾಗಾರ ನಡೆಯಿತು. ಕಾಲೇಜಿನ 2. ಪ್ರಾಂಶುಪಾಲರಾದ ಶ್ರೀ ಸಂಪತ್ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ ಎ, ರೊಟಾಕ್ ಕ್ಲಬ್ ನ ಸಯೋಂಜಕರಾಗಿರುವ ಉಪನ್ಯಾಸಕ ಶ್ರೀ ರಾಕೇಶ್ ರೊಟ್ರ್ಯಾಕ್ ಕ್ಲಬ್ ಅಕ್ಷಯ ಕಾಲೇಜಿನ ಶ್ರೀ ಸತ್ಯನಾರಾಯಣ ನಾಯಕ್ ಉಪಸ್ಥಿತಿಯಲ್ಲಿದ್ದರು. ಅಧ್ಯಯ- ಸಾಹಿತ್ಯ ಸಂಘದ ಮುಖ್ಯಸ್ಥರಾದ ಶ್ರೀ * ಹರಿಚಂದ್ರ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ಮಾತುಗಳಾಡಿದರು. ಅಧ್ಯಕ್ಷರು ರೋಟರಿ ಕ್ಲಬ್ ಪುತ್ತೂರಿ ನ ಶ್ರೀ ಪಶುಪತಿ ಶರ್ಮ ಇವರು ಶಾಲು ಮತ್ತು ಸ್ಮರಣಿಕೆ ನೀಡಿ ಸ್ವಾಗತಿಸಿದರು. ಶ್ರೀ ಉಜ್ವಲ್ ನಾಯಕ್ ರವರು ವಂದಿಸದರು. ಶ್ರೀ ಕೀರ್ತನ್ ಕಾರ್ಯಕ್ರಮವನ್ನು ನಿರೂಪಿಸಿದರು. ಸವಿ ಡೇಚಮ್ಮ ರವರು ನಿರ್ವಹಿಸಿದರು.