- Admission
- Eligibilty
- Sports/NSS Facilities
- Alumni
- Faculty
ಅಕ್ಷಯ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಇನ್ನಿಕ್ತ ಕಾಮರ್ಸ್ ಅಸೋಸಿಯೇಷನ್ ನ "INVESTOR AWARENESS" ಕಾರ್ಯಗಾರ
ಪುತ್ತೂರು, ಸೆಪ್ಟೆಂಬರ್ 22 : ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಇನ್ನೂಕ್ತ ಕಾಮರ್ಸ್ ಅಸೋಸಿಯೇಷನ್ ಮತ್ತು ಐಕ್ಯುಎಸಿ ಇದರ ಸಹ ಯೋಗದೊಂದಿಗೆ ಮಂಗಳೂರು ವಿಶ್ವ ವಿದ್ಯಾಲಯದ ವಾಣಿಜ್ಯ ಶಿಕ್ಷಕರ ಸಂಘದಿಂದ *INVESTOR AWARENESS PROGRAMME” ಎಂಬ ಒಂದು ದಿನದ ಮಾಹಿತಿ ಕಾರ್ಯಗಾರವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಮಾಹಿತಿ ಕಾರ್ಯಗಾರವನ್ನು ಕಾಲೇಜಿನ ಅಧ್ಯಕ್ಷರಾದ ಶ್ರೀ ಜಯಂತ್ ನಡುಬೈಲು ಉದ್ಘಾಟಿಸಿ ಅಧ್ಯಕ್ಷೀಯ ನೆಲೆಯಲ್ಲಿ ವಿಧ್ಯಾರ್ಥಿಗಳಿಗೆ ಶುಭಕೋರಿದರು.
“INVESTOR AWARENESS” ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ Investment Services Professional ಶ್ರೀಮತಿ ಸಪ್ನ ಶೆನೊಯ್ ಮತ್ತು Sr.Branch Manager ಲಿಯೋ ಅಮಲ್. ಎ ಅವರು ವಿದ್ಯಾರ್ಥಿಗಳಿಗೆ ಹಣಕಾಸಿನ ಸಾಕ್ಷರತೆ, ವೈಯಕ್ತಿಕ ಹೂಡಿಕೆಯ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಕೆ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ. ಎ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಕಿಶೋರ್ ಕುಮಾರ್ ರೈ, ಇಸ್ಮಿಕ ಕಾಮರ್ಸ್ ಅಸೋಸಿಯೇಷನ್ ಸಂಯೋಜಕಿ ಭವ್ಯಶ್ರೀ. ಬಿ ಉಪಸ್ಥಿತರಿದ್ದರು.ಪ್ರಾರ್ಥನೆ ಲಿಖಿತ ಮತ್ತು ಬಳಗದಿಂದ ನಡೆಯಿತು. ವಿದ್ಯಾರ್ಥಿ ಹಸ್ತಿಕ್ ಪಿ.ಕೆ ಸ್ವಾಗತಿಸಿ, ಪೂಜಾಶ್ರೀ ಡಿ. ಎಸ್ ವಂದಿಸಿದರು. ಸಾಕ್ಷಿ ಕೆ. ಇ ಕಾರ್ಯಕ್ರಮ ನಿರೂಪಿಸಿದರು.