- Admission
- Eligibilty
- Sports/NSS Facilities
- Alumni
- Faculty
ಅಕ್ಷಯ ಕಾಲೇಜು ರೋಟರ್ಯಾಕ್ಟ್ ಕ್ಲಬ್ ಓರಿಯಂಟೇಷನ್ ಕಾರ್ಯಕ್ರಮ
ರೋಟರಿ ಕ್ಲಬ್ ಪುತ್ತೂರು ಯುವದ ಪ್ರಾಯೋಜಕತ್ವದಲ್ಲಿ- ಅಕ್ಷಯ ಪ್ಯಾಷನ್ ಡಿಸೈನಿಂಗ್ ಕಾಲೇಜ್ ಸಂಪ್ಯದಲ್ಲಿ “ರೋಟರ್ಯಾಕ್ಟ್ ಕ್ಲಬ್’ ಓರಿಯಂಟೇಷನ್ ಕಾರ್ಯಕ್ರಮ ನಡೆಯಿತು.ಸಂಪನ್ಮೂಲ ವ್ಯಕ್ತಿಗಳಾಗಿ ರೋಟರ್ಯಾಕ್ಟ್ ರಾಹುಲ್ ಆಚಾರ್ಯ, ಡಿ. ಆರ್.ಆರ್. ಮತ್ತು ರೊ. ರತ್ನಾಕರ ರೈ, ಮಾಜಿ ಡಿ.ಆರ್.ಸಿ.ಸಿ.ರೋಟರ್ಯಾಕ್ಟ್ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.
ಅಕ್ಷಯ ಕಾಲೇಜಿನ ಛೇರ್ಮೆನ್ ಜಯಂತ್ ನಡುಬೈಲ್ ರವರು ರೋಟರಿ ಸಂಸ್ಥೆಯ ಅಂಗವಾದ ರೋಟರ್ಯಾಕ್ಟ್ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ, ಸಾರ್ವಜನಿಕ ಸಂಪರ್ಕ, ಮತ್ತು ವ್ಯಕ್ತಿತ್ವ ವಿಕಸನದೊಂದಿಗೆ ಸಮಾಜ ಸೇವೆ ಮಾಡುವ ಅವಕಾಶ ದೊರೆಯುತ್ತದೆ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು ಪ್ರಾಂಶುಪಾಲರಾದ ಸಂಪತ್ ಪಕ್ಕಳ, ರೋಟರಿ ಜಿಲ್ಲೆ 3181 ರ ವಲಯ 5ರ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈ, ರೊಟರಿ ಯುವದ ಅಧ್ಯಕ್ಷ ಪಶುಪತಿ ಶರ್ಮ, ಕಾಲೇಜಿನ ಉಪನ್ಯಾಸಕರಾದ ರಾಕೇಶ್.ಕೆ, ರೋಟರ್ಯಾಕ್ಟ್ ನಿಯೋಜಿತ ಅಧ್ಯಕ್ಷ ಜೀವನ್,ಕಾರ್ಯದರ್ಶಿ ಸವಿ ದೇಚಮ್ಮ ಉಪಸ್ಥಿತರಿದ್ದರು.