- Admission
- Eligibilty
- Sports/NSS Facilities
- Alumni
- Faculty
Aati Koota
ಆಟಿ ತಿಂಗಳಿನಲ್ಲಿ ವಿಜ್ಞಾನ, ಆಯುರ್ವೇದದ ಸತ್ವವಿತ್ತು, ಆಟಿ ಎಂದರೆ
ಮನೋವಿಜ್ಞಾನವು ಆಗಿತ್ತು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ
ನಾರಾಯಣಗುರು ತುಳು ಅಧ್ಯಯನ ಪೀಠದ ನಿರ್ದೇಶಕ ಡಾ ಗಣೇಶ್ ಅಮೀನ್ ಸಂಕಮಾರ್
ಹೇಳಿದರು.
ಅಕ್ಷಯ ಎಜುಕೇಶನಲ್ ಟ್ರಸ್ಟ್ ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜ್
ವತಿಯಿಂದ ಕುಂಬ್ರದ ಅಕ್ಷಯ ಆರ್ಕೇಡ್ನಲ್ಲಿ ನಡೆದ ಆಟಿ ಕೂಟ ಉದ್ಘಾಟಿಸಿ ಅವರು
ಮಾತನಾಡಿದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ತುಳುನಾಡಿನ ಆಟಿ
ತಿಂಗಳ ಮಹತ್ವದ ಬಗ್ಗೆಯು ಕಾರ್ಯಕ್ರಮ ಏರ್ಪಡಿಸಿರುವುದು ಉತ್ತಮ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ ಅಕ್ಷಯ ಕಾಲೇಜಿನ ವ್ಯವಸ್ಥಾಪಕ ಜಯಂತ್ ನಡುಬೈಲು
ಮಾತನಾಡಿ, ಮಕ್ಕಳಿಗೆ ಪೂರ್ವಜರ ಗುರು-ಹಿರಿಯರ ಕಷ್ಟದ ಹಿನ್ನಲೆ ಗೊತ್ತಾಗಬೇಕಿದೆ.
ಹಾಗಾಗಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಸಿಗಬೇಕು, ಆ ಮೂಲಕ ಉದ್ಯೋಗ ದೊರಕಬೇಕು ಎನ್ನುವ ನಿಟ್ಟಿನಲ್ಲಿ ಕಾಲೇಜನ್ನು ಸ್ಥಾಪಿಸಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ವೃತ್ತಿಪರ ಕೋರ್ಸ್ ಗಳನ್ನು ಪರಿಚಯಿಸಲಿದ್ದೇವೆ ಎಂದರು. ಬೆಟ್ಟಂಪಾಡಿ ಸ. ಪ.ಪೂ.ಕಾ ಪ್ರಾಂಶುಪಾಲ ಗೋಪಾಲ ಗೌಡ ಶುಭಹಾರೈಸಿದರು.
ಕಾಲೇಜಿನ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್, ಆಡಳಿತಾಧಿಕಾರಿ ಅರ್ಪಿತ್ ಟಿ. ಎ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸ್ವರ್ಣಜ್ಯೋಸ್ನಾ ಉಪಸ್ಥಿತರಿದ್ದರು. ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ ಸ್ವಾಗತಿಸಿ, ಉಪನ್ಯಾಸಕಿ ಪ್ರಭಾವತಿ ವಂದಿಸಿದರು. ಉಪನ್ಯಾಸಕಿ ಭವ್ಯಶ್ರೀ ಕೋಟ್ಯಾನ್ ನಿರೂಪಿಸಿದರು.