ಅಕ್ಷಯ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಾಗಾರ
ಕಾನೂನನ್ನು ಯಾವ ಸಂದರ್ಭದಲ್ಲಿ ಎಲ್ಲಿ ಹೇಗೆ ಪಾಲಿಸಬೇಕು ಎಂಬ ಅರಿವು ಹಾಗೂ ಜವಾಬ್ದಾರಿ ಪ್ರಜ್ಞಾವಂತ ನಾಗರಿಕರಿಗೆ ಇರಬೇಕಾಗುತ್ತದೆ. ನಾವು ಕಾನೂನಿನ ಹೊರತಾಗಿ ಜೀವಿಸುವುದು ಕಷ್ಟ. ಹೆಣ್ಣುಮಕ್ಕಳ ಜವಾಬ್ದಾರಿ ಕಾನೂನು ಪಾಲನೆಯಲ್ಲಿ ಬಹುಮುಖ್ಯವಾಗಿದೆ. ಸ್ವರಕ್ಷಣೆ ಮತ್ತು ಸಾಮಾಜಿಕ ವರ್ತನೆಯ ಬಗ್ಗೆ ನಮಗೆ ಇರಬೇಕಾಗುತ್ತದೆ. ಹೆಣ್ಣಿಗೆ ಕಿರುಕುಳ, ದೌರ್ಜನ್ಯ ಹೆಚ್ಚಾಗಿ ತಮ್ಮ ಪರಿಚಿತರಿಂದಲೇ ಆಗುತ್ತದೆ. ದೇಶದ ಭವಿಷ್ಯವಾದ ಯುವ ಸಮುದಾಯ ದುಶ್ಚಟಗಳಿಗೆ ಮಾರುಹೋಗಬಾರದು ಎಂದು ಗ್ರಾಮಾಂತರ ಠಾಣೆ, ಸಂಪ್ಯ ಪುತ್ತೂರಿನ ಪ್ರೊಬಷನರಿ ಉಪನರೀಕ್ಷಕರಾದ ಶ್ರೀಕಾಂತ್ ರಾಥೋಡ್ ಅವರು ಹೇಳಿದರು.
ಅವರು ಅಕ್ಷಯ ಕಾಲೇಜು ಪುತ್ತೂರಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ವತಿಯಿಂದ ಇತ್ತೀಚೆಗೆ ನಡೆದ ಕಾನೂನು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅವರು ಅಕ್ಷಯ ಕಾಲೇಜು ಪುತ್ತೂರಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ವತಿಯಿಂದ ಇತ್ತೀಚೆಗೆ ನಡೆದ ಕಾನೂನು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಕೊಂಡಿದ್ದ ಅಕ್ಷಯ ಕಾಲೇಜಿನ ಅಧ್ಯಕ್ಷರಾದ ಜಯಂತ್ ನಡುಬೈಲು ಅವರು ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ನಡತೆಯನ್ನು ರೂಢಿಸಿಕೊಂಡು ಜವಾಬ್ದಾರಿಯಿಂದ ವರ್ತಿಸಬೇಕು. ಗುಂಪುಗಾರಿಕೆ, ಗಲಾಟೆಯಿಂದ ದೂರವಿದ್ದು ಸಮಾಜಕ್ಕೆ ಪೂರಕವಾಗಿ ಬೆಳೆಯಬೇಕು. ಸಮಸ್ಯೆಗಳು ಬಂದಾಗ ಅದನ್ನು ಹೆತ್ತವರೊಡನೆ ಮತ್ತು ಶಿಕ್ಷಕರೊಡನೆ ಸಮಾಲೋಚಿಸಿ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.
ಪುತ್ತೂರು ಗ್ರಾಮಾಂತರ ಠಾಣೆ ಸಂಪ್ಯದ ಉಪನಿರೀಕ್ಷಕರಾದ ಶ್ರೀಧರ್ ರೈ, ದಯಾನಂದ್, ಹರ್ಷಿತ್ ಅವರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಪಕ್ಕಳ ಅವರು ಸ್ವಾಗತಿಸಿದರೆ, ಆಡಳಿತಾಧಿಕಾರಿ ಅರ್ಪಿತ್ ವಂದಿಸಿದರು. ಸ್ವಯಂಸೇವಕಿ ವಿಸ್ಮಯ ನಾಯಕ್ ಮತ್ತು ಬಳಗ ಪ್ರಾರ್ಥಿಸಿದರೆ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕು. ರಶ್ಮಿ ನಿರೂಪಿಸಿದರು.