ಅಕ್ಷಯ ಕಾಲೇಜಿನ ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭ.
ಇತ್ತೀಚಿನ ದಿನಗಳಲ್ಲಿ ಸೃಜನಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿರುವ ಹಿನ್ನೆಲೆಯಲ್ಲಿ, ಇಂಟೀರಿಯರ್ ಡಿಸೈನ್ ಕೋರ್ಸ್ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಮನೆ, ಕಚೇರಿ ಹಾಗೂ ವಾಣಿಜ್ಯ ಸ್ಥಳಗಳ ವಿನ್ಯಾಸದಲ್ಲಿ ಹೊಸತನ ತರುವ ಈ ಕೋರ್ಸ್, ವಿದ್ಯಾರ್ಥಿಗಳಿಗೆ ಸೃಜನಶೀಲತೆ ಹಾಗೂ ತಾಂತ್ರಿಕ ಜ್ಞಾನವನ್ನು ಒಟ್ಟಿಗೆ ನೀಡುತ್ತದೆ. ಈ ಕೋರ್ಸ್ ಮೂಲಕ ಸ್ಪೇಸ್ ಪ್ಲಾನಿಂಗ್, ಲೈಟಿಂಗ್, ಕಲರ್ ಕಾಂಬಿನೇಶನ್ ಮತ್ತು ಮಟೀರಿಯಲ್ ಬಳಕೆ ಮುಂತಾದ ವಿಷಯಗಳಲ್ಲಿ ತರಬೇತಿ ಪಡೆದು, ವಿದ್ಯಾರ್ಥಿಗಳು ಉದ್ಯೋಗ ಮತ್ತು ಸ್ವಯಂ ಉದ್ಯಮದ ಹಲವಾರು ಅವಕಾಶಗಳನ್ನು ಪಡೆಯುತ್ತಾರೆ.
ಅಕ್ಷಯ ಕಾಲೇಜಿನ ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ ಎಲೈಟ್ ಅಸೋಸಿಯೇಷನ್ ಹಾಗೂ ಭಾರತ್ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ಬೇಸ್), ಮಂಗಳೂರು ಜಂಟಿಯಾಗಿ ಆರಂಭಿಸಿದ ತ್ರೀಡಿಎಸ್ ಮ್ಯಾಕ್ಸ್ ಮತ್ತು ತ್ರೀಡಿ ರೆಂಡರಿಂಗ್ ಎಂಬ ವಿಷಯದಲ್ಲಿ ನಡೆದ ಕಾರ್ಯಗಾರದ ಪ್ರಮಾಣ ಪತ್ರ ವಿತರಣಾ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಬೇಸ್‌ನ ಸ್ಥಾಪಕ ನವೀನ್ ಗುರುರಾಜ್ ಶಿಕ್ಷಣದ ಜೊತೆಗೆ ಸ್ವಯಂ ಅಭಿವೃದ್ಧಿಗೆ ಒತ್ತು ಕೊಡಬೇಕಾಗಿ ಸಲಹೆ ನೀಡಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಕೆ ಪಕ್ಕಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಮಾತುಗಳನ್ನು ಹೇಳಿದರು.
ಕಾಲೇಜಿನ ಉಪ ಪ್ರಾಂಶುಪಾಲರೂ, ಇಂಟೀರಿಯರ್ ಡಿಸೈನ್ ವಿಭಾಗದ ಮುಖ್ಯಸ್ಥರೂ ಆದ ರಕ್ಷಣ ಟಿ ಆರ್ ಪ್ರಾಸ್ತಾವಿಕ ನುಡಿಯನ್ನು ನುಡಿದರು. ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್ ಟಿ.ಎ., ಬೇಸ್‌ನ ಸಹ ಸಂಸ್ಥಾಪಕಿ ಅರ್ಚನಾ ಉಪಸ್ಥಿತರಿದ್ದರು. ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು.



