ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ
ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯನಿರಹಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಐಕ್ಯೂಎಸಿ ಮತ್ತು
ಗ್ರಂಥಾಲಯ ವಿಭಾಗ ಇದರ ಜಂಟಿ ಸಹಯೋಗದಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನವನ್ನು ಆಚರಿಸಲಾಯಿತು.
ರಾಮ ಕೆ , ಗ್ರಂಥಪಾಲಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, “A READING
CAN CHANGE YOUR LIFE” ವಿಷಯದ ಕುರಿತಾಗಿ ಮಾತನಾಡಿ ಮನುಷ್ಯನ ಜೀವನ ಬದಲಾಗುವುದು ಅವನ ಯೋಚನೆಗಳಿಂದ ಮತ್ತು ಯೋಜನೆಗಳಿಂದ. ಒಳ್ಳೆಯ ಯೋಚನೆ ಬರಬೇಕಾದರೆ ನಮ್ಮಲ್ಲಿ ಜ್ಞಾನವಿರಬೇಕು ಅದರ ಮೊದಲ ಹೆಜ್ಜೆಯೇ ಓದು ಎಂಬುದಾಗಿ
ಹೇಳಿದರು. ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ನಿರಂತರವಾಗಿ ಬೆಳೆಸಿಕೊಳ್ಳಿ ಎಂಬುದಾಗಿ ಕರೆಯಿತ್ತರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಕ್ಷಯ ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳ ಅವರು ವಿದ್ಯಾರ್ಥಿಗಳು ಓದುವ ಅಭ್ಯಾಸ
ಮೈಗೂಡಿಸಿಕೊಂಡು ಸಾಮಾಜಿಕ ಜಾಲತಾಣಗಳ ಬಳಕೆ ಮಿತವಾಗಿರಿಸಿ ಪುಸ್ತಕಗಳ ಮೇಲೆ ಪ್ರೀತಿ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಅರ್ಪಿತ್ ಟಿ ಎ ಉಪಸ್ಥಿತರಿದ್ದರು. ಐ ಕ್ಯೂ ಎ ಸಿ ಸಂಯೋಜಕಿ
ರಶ್ಮಿ ಕೆ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು ಹಾಗೂ ಕಾರ್ಯಕ್ರಮದ ಸಂಯೋಜಕಿ ಪ್ರಭಾವತಿ ಕೆ , ರಾಷ್ಟ್ರೀಯ ಗ್ರಂಥಪಾಲಕರ
ದಿನಾಚರಣೆ ಬಗ್ಗೆ ಪ್ರಸ್ತಾವಿಸಿ ಸರ್ವರನ್ನು ಸ್ವಾಗತಿಸಿದರು. ಉಪನ್ಯಾಸಕಿ ರಶ್ಮಿತಾ ಧನ್ಯವಾದ ಸಮರ್ಪಿಸಿದರು. ದೇವಿಕಾ ಮತ್ತು ಸ್ವರ್ಣ
ತೃತೀಯ F D, ಪ್ರಾರ್ಥಿಸಿದರು . ರಕ್ಷಾ ತೃತೀಯ ಬಿ ಸಿ ಎ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರಥಮ ಪದವಿಯ
ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು.

