ಪುತ್ತೂರು : ಅಕ್ಷಯ ಕಾಲೇಜು ಪುತ್ತೂರು, ಫ್ಯಾಷನ್ ಡಿಸೈನ್ ವಿಭಾಗ, “ಫಸೆರಾ” ಫ್ಯಾಷನ್ ಡಿಸೈನ್ ಅಸೋಸಿಯೇಷನ್ ಮತ್ತು ಐಕ್ಯೂಎಸಿ ಇವುಗಳ ಸಹಯೋಗದಲ್ಲಿ ಹೊಸದಾಗಿ ಪ್ರವೇಶ ಪಡೆದಿರುವ ಪ್ರಥಮ ಫ್ಯಾಷನ್ ಡಿಸೈನ್ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಗಾರವು ದಿನಾಂಕ 05 ಆಗಸ್ಟ್ 2024, ಸೋಮವಾರದಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ತರಬೇತುದಾರರಾಗಿ ಶ್ರೀ ಕಿಶನ್ ಎನ್ ರಾವ್, ಕೌಶಲ್ಯ ತರಬೇತುದಾರರು ಹಾಗೂ ವಿಭಾಗ ಮುಖ್ಯಸ್ಥರು – ಫ್ಯಾಷನ್ ಡಿಸೈನ್ ವಿಭಾಗ, ಅಕ್ಷಯ ಕಾಲೇಜ್ ಪುತ್ತೂರು ಇವರು ವಿದ್ಯಾರ್ಥಿಗಳಿಗೆ “GOAL SETTING” ಎನ್ನುವ ವಿಷಯದಲ್ಲಿ ಮಾಹಿತಿ ಕಾರ್ಯಗಾರವನ್ನು ನಡೆಸಿಕೊಟ್ಟರು.
“ಶಿಕ್ಷಣದ ಜೊತೆಯಲ್ಲಿ ಕೌಶಲ್ಯ ಅಭಿವೃದ್ಧಿ ಕೂಡ ವಿದ್ಯಾರ್ಥಿಗಳನ್ನು ನಿರ್ಧರಿತ ಗುರಿ ತಲುಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಉನ್ನತವಾದ ಗುರಿ ಇರಬೇಕು” ಎಂದು ಹೇಳಿದರು.
ಅಸೋಸಿಯೇಷನ್ ಸಂಯೋಜಕಿ ಕು. ಜನಿತ ಇವರು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ವಿಭಾಗದ ಅಧ್ಯಾಪಕರು ಮತ್ತು ಪ್ರಥಮ ಫ್ಯಾಶನ್ ಡಿಸೈನ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.